. ಕನ್ಯಾನ: ಬಾರ್ ತೆರೆಯದಂತೆ ಮಧ್ಯಾಂತರ ತಡೆಯಾಜ್ಞೆ
ಬಂಟ್ವಾಳ, ಆ.30: ಕನ್ಯಾನ ಬಾಳೆಕೋಡಿ ಶ್ರೀ ಕಾಶೀಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದ ಬಳಿ ನಿರ್ಮಿಸಲುದ್ದೇಶಿಸಿದ ಖಾಸಗಿ ಬಾರ್ ಮತ್ತು ರೆಸ್ಟೋರಂಟ್ ತೆರೆಯಲು ಗ್ರಾಪಂ ನೀಡಿದ ನಿರಾಕ್ಷೇಪಣ ಪತ್ರಕ್ಕೆ ಸ್ಥಳೀಯರ ಆಕ್ಷೇಪದ ಮನವಿಯನ್ನು ಪುರಸ್ಕರಿಸಿ, ಬಂಟ್ವಾಳ ತಾಪಂ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಧಾರ್ಮಿಕ ಕ್ಷೇತ್ರದ ಬಳಿ ಬಾರ್ ಮತ್ತು ರೆಸ್ಟೋರಂಟ್ ತೆರೆದಲ್ಲಿ ಸಮಾಜ ವಿರೋಧಿ ಚಟುವಟಿಕೆ ನಡೆಯುವ ಸಾಧ್ಯತೆಯಿದೆ ಎಂದು ಬಾಳೆಕೋಡಿ ಜಯಪ್ರಸಾದ್‌ಆಕ್ಷೇಪಿಸಿ, ಕನ್ಯಾನ ಗ್ರಾಪಂ ನೀಡಿದ ಪರವಾನಿಗೆಯನ್ನು ರದ್ದುಪಡಿಸಬೇಕೆಂದು ಬಂಟ್ವಾಳ ತಾಪಂಗೆ ಮನವಿ ಸಲ್ಲಿಸಿದ್ದರು.
ಬಾರ್ ಧಾರ್ಮಿಕ ಕ್ಷೇತ್ರದ ಪಕ್ಕ ನಿರ್ಮಾ ಣವಾಗಲಿದೆ. ಈ ಹಿಂದೆ ಇಲ್ಲಿ ಗುಂಪು ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ ಮತ್ತು ಜನವಸತಿ ಪ್ರದೇಶಕ್ಕೆ ಹತ್ತಿರವಾಗಿದೆ ಎಂಬ ಅಂಶಗಳನ್ನು ಮನಗಂಡು ಬಂಟ್ವಾಳ ತಾಪಂ ಆಡಳಿತ ಕನ್ಯಾನ ಗ್ರಾಮ ಪಂಚಾ ಯತ್ ನಿರ್ಣಯ 71ನ್ನು ರದ್ದುಪಡಿಸಿ, ಆದೇಶ ಹೊರಡಿಸಿದೆ.
ಈ ಬಗ್ಗೆ ಕನ್ಯಾನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸುದ್ದಿಗೋಷ್ಠಿ ನಡೆಸಿ, ಎಲ್ಲ ಆರೋಪಗಳನ್ನು ನಿರಾಕರಿಸಿ ಬಾರ್ ನಿರ್ಮಿಸಿಯೇ ಸಿದ್ದ ಎಂದು ಹೇಳಿಕೊಂಡಿದ್ದರು.





