ಬಿಡಬ್ಲುಎಫ್‌ನಿಂದ ಫಲಾನುಭವಿಗಳಿಗೆ ಐದು ಶೌಚಾಲಯಗಳ ಹಸ್ತಾಂತರ

ಮಂಗಳೂರು, ಆ.31: ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲುಎಫ್)ನ ‘ಶೌಚಾಲಯ’ ಯೋಜನೆಯಡಿ 4ನೆ ಹಂತದಲ್ಲಿ ನಿರ್ಮಿಸಲಾಗಿರುವ ಐದು ಶೌಚಾಲಯಗಳನ್ನು ಫಲಾನುಭವಿಗಳಿಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಪುತ್ತೂರು ತಾಲೂಕಿನ ರೆಂಜಿಲಾಡಿ ಗ್ರಾಮದ ಪೇರಡ್ಕ ಪ್ರದೇಶದ ಅರ್ಹ ಐವರು ಫಲಾನುಭವಿಗಳಿಗೆ ನಿರ್ಮಿಸಿಕೊಟ್ಟಿರುವ ಈ ಶೌಚಾಲಗಳನ್ನು ಬಿಡಬ್ಲುಎಫ್ ಖಜಾಂಚಿ ಮುಹಮ್ಮದ್ ಸಿದ್ದೀಕ್ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಪಟ್ರಮೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಐವರು ಫಲಾನುಭವಿಗಳನ್ನು ಗುರುತಿಸಿ ಅವರಿಗೂ ಶೌಚಾಲಯಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಎಂ. ಫ್ರೆಂಡ್ಸ್‌ನ ಹನೀಫ್ ಹಾಜಿ ಗೋಳ್ತಮಜಲು, ಸಾದಿಕ್, ಮಿಲೇನಿಯಮ್ ಫ್ರೆಂಡ್ಸ್‌ನ ಇಸ್ಮಾಯೀಲ್ ಉಪಸ್ಥಿತರಿದ್ದರು.
ಪೇರಡ್ಕದಲ್ಲಿ ಐದು ಶೌಚಾಲಯಗಳ ಹಸ್ತಾಂತರದೊಂದಿಗೆ ಬಿಡಬ್ಲುಎಫ್ ಇದುವರೆಗೆ ದ.ಕ. ಜಿಲ್ಲೆ ಮತ್ತು ಮಂಜೇಶ್ವರ ತಾಲೂಕು ತಾಲೂಕಿನ ವಿವಿಧೆಡೆಗಳಲ್ಲಿ ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ 128 ಶೌಚಾಲಗಳನ್ನು ಫಲಾನುಭವಿಗಳಿಗೆ ನಿರ್ಮಿಸಿಕೊಟ್ಟಂತಾಯಿತು.





