ಕೀಟಲೆಕೊಟ್ಟ ರೋಡ್‌ರೋಮಿಯೊಗೆ ತಕ್ಕಶಾಸ್ತಿ ಮಾಡಿದ ವಿದ್ಯಾರ್ಥಿನಿಯರು : ವೀಡಿಯೊ

ಭುವನೇಶ್ವರ್,ಆ.31: ಕೀಟಲೆ ನೀಡಿದ ರೋಡ್ ರೋಮಿಯೊ ಒಬ್ಬಾತನಿಗೆ ಇಬ್ಬರು ವಿದ್ಯಾರ್ಥಿನಿಯರು ಸೇರಿ ಬುದ್ಧಿಕಲಿಸಿದ ಘಟನೆ ಕಳೆದ ಭಾನುವಾರ ಒಡಿಶಾದ ಭುವನೇಶ್ವರ್‌ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಸಿನಿಂದ ಪ್ರಚಾರವಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ತರಗತಿ ಮುಗಿದು ಹಾಸ್ಟೆಲ್‌ಗೆ ಮರಳುತ್ತಿದ್ದ ಎಂಬಿಎ ವಿದ್ಯಾರ್ಥಿನಿಯನ್ನು ಮಧ್ಯವಯಸ್ಕನಾದ ಓರ್ವ ವ್ಯಕ್ತಿ ಹಿಂಬಾಲಿಸಿ ಬಂದು ಅಶ್ಲೀಲ ಸನ್ನೆಗಳನ್ನು ಮಾಡಿದ್ದ. ನಂತರ ವಿದ್ಯಾರ್ಥಿನಿ ತನ್ನ ಗೆಳತಿ ಕಾನೂನು ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದಿದ್ದು, ಇಬ್ಬರು ಸೇರಿ ಆ ವ್ಯಕ್ತಿಗೆ ಥಳಿಸಿದ್ದಾರೆ. ವರದಿಯಾಗಿರುವ ಪ್ರಕಾರ ಕೀಟಲೆ ನೀಡಿದ ವ್ಯಕ್ತಿ ಖಾಸಗಿ ಶಾಲೆಯೊಂದರ ಅಧ್ಯಾಪಕ ಎನ್ನಲಾಗಿದೆ.
Next Story





