ದೇವಾಲಯದ ಮೇಲೆ ದಾಳಿಗೆ ಸಂಚು; 3 ಐಸಿಸ್ ಉಗ್ರರ ಬಂಧನ

ಕೌಲಾಲಂಪುರ, ಆ. 31: ಸ್ವಾತಂತ್ರ ದಿನಾಚರಣೆಯ ಮುನ್ನಾ ದಿನದಂದು ಬಟು ಕೇವ್ಸ್‌ನಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವೊಂದರ ಮೇಲೆ ಹಾಗೂ ದೇಶಾದ್ಯಂತ ಮನರಂಜನಾ ಕೇಂದ್ರಗಳು ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವ ಆರೋಪದಲ್ಲಿ ಐಸಿಸ್ ಭಯೋತ್ಪಾದಕ ಗುಂಪಿನ ಮೂವರು ಉಗ್ರರನ್ನು ಮಲೇಶ್ಯದಲ್ಲಿ ಬಂಧಿಸಲಾಗಿದೆ.
ವಿಶೇಷ ಭಯೋತ್ಪಾದನಾ ನಿಗ್ರಹ ಘಟಕವು ಈ ಭಯೋತ್ಪಾದಕರನ್ನು ಆಗಸ್ಟ್ 27 ಮತ್ತು ಆಗಸ್ಟ್ 29ರ ನಡುವೆ ಬಂಧಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.
ಮಲೇಶ್ಯದ ಸ್ವಾತಂತ್ರ ದಿನದ ಮುನ್ನಾ ದಿನವಾದ ಮಂಗಳವಾರ ಈ ಮೂವರು ಒಂದು ಹಿಂದೂ ದೇವಾಲಯ, ಮನರಂಜನಾ ಕೇಂದ್ರಗಳು ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಬಟು ಕೇವ್ಸ್‌ನಲ್ಲಿ ಪ್ರಸಿದ್ಧ ಮುರುಗನ್ ದೇವಾಲಯವಿದೆ.
ದಾಳಿ ನಡೆಸಿದ ಬಳಿಕ ಸಿರಿಯಕ್ಕೆ ಪಲಾಯನಗೈಯಲು ಅವರು ಯೋಜನೆ ರೂಪಿಸಿದ್ದರು ಎಂದರು.
Next Story





