ಸೆ.1ರಂದು ಟಿಪ್ಪು ಸುಲ್ತಾನ್ ಉರೂಸ್ ಸಮಾರಂಭ
ಸಮಾರಂಭದಲ್ಲಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಭಾಗಿ

ಮೈಸೂರು,ಆ.31: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಡೆಸಿಕೊಂಡು ಬರುತ್ತಿರುವ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ (ರ) ಉರೂಸ್ ಸಮಾರಂಭ ಸೆ.1ರಂದು ಮೈಸೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸೆ.1ರಂದು ಅಪರಾಹ್ನ 3 ಗಂಟೆಗೆ ಟಿಪ್ಪು ಕೋಟೆಯಿಂದ ಆರಂಭಗೊಳ್ಳುವ ರ್ಯಾಲಿಯು ಟಿಪ್ಪು ಸಮಾಧಿ ಬಳಿ ಸಮಾಪನಗೊಳ್ಳಲಿದೆ. ಬಳಿಕ ನಡೆಯುವ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಡ ಶಿಕ್ಶಣ ಸಚೀವ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಲಿದ್ದು, ಕಾಂತಪುರಂ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ರಾಜ್ಯ ಸಚಿವರಾದ ಡಿ.ಕೆ ಶಿವಕುಮಾರ್, ಯು.ಟಿ. ಖಾದರ್, ಕರ್ನಾಟಕ ಸರಕಾರದ ಯೋಜನಾ ಆಯೊಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ, ಸಂಸದರಾದ ಕೆ.ರಹ್ಮಾನ್ ಖಾನ್, ಸಿ ಎಸ್. ಪುಟ್ಟರಾಜು, ಶಾಸಕರಾದ ಎ.ಬಿ ರಮೇಶ್, ಕೆ.ಎಸ್. ಪುಟ್ಟಣ್ಣಯ್ಯ ಸೇರಿದಂತೆ ಇನ್ನಿತರ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಟಿಪ್ಪು ಸುಲ್ತಾನ್ ಅರಬಿಕ್ ಕಾಲೇಜ್‌ನಲ್ಲಿ ವ್ಯಾಸಂಗ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಖಮರುಲ್ ಉಲಮಾ ಸನದುದಾನ ನೀಡಲಿದ್ದಾರೆ.
ಕಾಲೇಜು ಪ್ರಿನ್ಸಿಪಾಲ್ ಮುಫ್ತಿ ಸಜ್ಜಾದ್ ಉಸೈನ್ ಮಿಶ್ಬಾಹಿ, ಕಾಲೇಜು ಅಧ್ಯಕ್ಷ ಮನ್ಸೂರ್ ಸೇಠ್, ಕಾರ್ಯದರ್ಶಿ ಸೈಯದ್ ಯೂನುಸ್ ಸಾಹೇಬ್, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ, ಅಬ್ದುಲ್ಲಾ ಬಾವ, ಸಲಾಂ ರಝ್ವಿ, ಸಿ.ಪಿ. ಸಿರಾಜುದ್ದೀನ್ ಸಖಾಫಿ, ಸೈಯದ್ ಸಾದಿಕ್ ನೂರಾನಿ, ಅಬ್ದುಲ್ ಅಝೀಝ್ ಖುವ್ವಾಮಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







