ಈ ಯುವ ರಾಜಕಾರಣಿ ರಿಯೋಗೆ ಹೋಗಿದ್ದರೆ ... ಲಾಠಿಯ ಪವರ್ ಗೆ ಕಾಲಿಗೆ ಬುದ್ಧಿ ಹೇಳಿದ ನಾಯಕ !
ಇತ್ತೀಚಿಗೆ ಕೇರಳದಲ್ಲಿ ಮುಸ್ಲಿಂ ಸ್ಟೂಡೆಂಟ್ಸ್ ಫೆಡೆರೇಶನ್ ಪಠ್ಯ ಪುಸ್ತಕ ವಿತರಣೆಯಲ್ಲಿ ವಿಳಂಬ ನೀತಿಯನ್ನು ವಿರೋಧಿಸಿ ಪ್ರತಿಭಟನೆ ಆಯೋಜಿಸಿತ್ತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ನಾಯಕ ಶರ್ಫುದ್ದೀನ್ ಜಿಫ್ರಿ ತಂಗಳ್ ಅವರು ಪಠ್ಯ ಪುಸ್ತಕ ವಿತರಣೆಯಾಗದೇ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದರು. ಆದರೆ ಒಂದು ಹಂತದಲ್ಲಿ ಪ್ರತಿಭಟನಾಕಾರರ ಹಠಕ್ಕೆ ಪೊಲೀಸರು ಲಾಠಿ ಬೀಸಲು ನಿರ್ಧರಿಸಿದರು. ಆಗ ಯುವ ನಾಯಕನ ನಾಯಕತ್ವ ಬಯಲಿಗೆ ಬಂತು. ಲಾಠಿ ಏಟಿನ ಭಯದಿಂದ ಅವರು ಅಲ್ಲಿಂದ ಕಾಲ್ಕಿತ್ತ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ . ಇದನ್ನು ಮೊದಲು ರಿಪೋರ್ಟರ್ ಟಿವಿ ಎಂಬ ಚಾನಲ್ ಪ್ರಸಾರ ಮಾಡಿತ್ತು.
Next Story





