Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ‘ಮೀನುಗಾರರ ಸಮಸ್ಯೆಗೆ ಸ್ಪಂದಿಸದ...

‘ಮೀನುಗಾರರ ಸಮಸ್ಯೆಗೆ ಸ್ಪಂದಿಸದ ಸರಕಾರಗಳು’

ನಿರಂತರ ಹೋರಾಟ ನಡೆಸಿದರೂ ಸ್ಪಂದಿಸದ ಆಡಳಿತ ವರ್ಗ

ವಾರ್ತಾಭಾರತಿವಾರ್ತಾಭಾರತಿ31 Aug 2016 10:21 PM IST
share
‘ಮೀನುಗಾರರ ಸಮಸ್ಯೆಗೆ ಸ್ಪಂದಿಸದ ಸರಕಾರಗಳು’

   ಹೊನ್ನಾವರ, ಆ.31: ಶರಾವತಿ ಅಳಿವೆಯಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಮೀನುಗಾರರು ಬುಧವಾರ ಕಾಸರಕೋಡಿನಿಂದ ಪಟ್ಟಣದವರೆಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ತಡೆ ನಡೆಸಿ, ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ, ಪ್ರಧಾನಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಪೊಲೀಸ್ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮೀನುಗಾರರ ಮುಖಂಡ ಅಶೋಕ ಕಾಸರಕೋಡ ಮಾತನಾಡಿ, 28 ವರ್ಷಗಳಿಂದ ಅಳಿವೆ ಸಮಸ್ಯೆ ಇದೆ. 60 ಕ್ಕೂ ಹೆಚ್ಚು ಮೀನುಗಾರರು ಜೀವ ಕಳೆದುಕೊಂಡಿದ್ದಾರೆ. 40 ಕ್ಕೂ ಹೆಚ್ಚು ಬೋಟ್‌ಗಳು ದುರಂತಕ್ಕೀಡಾಗಿವೆ. ರಾಜ್ಯದ ಬೇರೆ ಭಾಗಗಳಲ್ಲಿ ಪ್ರತಿಭಟನೆಯಾದರೆ ಸರಕಾರದ ಆಸ್ತಿಪಾಸ್ತ್ತಿಗಳಿಗೆ ಹಾನಿಯಾಗುತ್ತಿತ್ತು. ಆದರೆ, ಮೀನುಗಾರರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ. ಎಲ್ಲ ಪಕ್ಷದವರು, ಎಲ್ಲ ಸರಕಾರಗಳು ನಮ್ಮನ್ನು ಆಳಿದ್ದಾರೆ. ಆದರೆ ಯಾರೂ ಮೀನುಗಾರರ ಸಮಸ್ಯೆಗೆ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ವಿ.ಆರ್.ಗೌಡ, ಮೀನುಗಾರರ ಸಮಸ್ಯೆ ಕುರಿತ ಮನವಿಯನ್ನು ಸರಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖಾ ಅಧಿಕಾರಿಗಳು ಹಾಗೂ ಮೀನುಗಾರರ ಸಂಘಟನೆಯನ್ನೊಳಗೊಂಡು ಸಮಿತಿ ರಚಿಸಿ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು. ಮನವಿ:

 ಶರಾವತಿ ನದಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆದು ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. 28 ವರ್ಷಗಳ ಹಿಂದೆ ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರಿನ ಪರ್ಶಿಯನ್ ಬೋಟ್‌ನಲ್ಲಿದ್ದ 9 ಜನ ಮೀನುಗಾರರು ಜಲ ಸಮಾಧಿಯಾದಾಗಿನಿಂದ ಆರಂಭವಾದ ಅಳಿವೆಯ ಸಮಸ್ಯೆಯ ಹೋರಾಟ ಇಂದಿನವರೆಗೂ ಹೋರಾಟವಾಗಿಯೇ ಉಳಿದಿದೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿ ಪ್ರಾರ್ಥಿಸಿಕೊಳ್ಳುವುದೇ ನಮ್ಮ ಕಾಯಕವಾಗಿದೆ. ಆದರೆ, ನಮ್ಮ ಮನವಿಗಳಿಗೆ ಬೆಲೆ ಇಲ್ಲ, ನಮ್ಮ ಹೋರಾಟಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ. 1994 ರಿಂದ ಈ ವರೆಗೆ 25 ಕ್ಕೂ ಹೆಚ್ಚು ಬೋಟ್‌ಗಳು ಮುಳುಗಡೆಯಾಗಿದ್ದು, ಲೆಕ್ಕವಿಲ್ಲದಷ್ಟು ಬೋಟ್‌ಗಳಿಗೆ ಭಾಗಶ ಹಾನಿಯಾಗಿದೆ. 60 ಕ್ಕೂ ಹೆಚ್ಚು ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಇಲಾಖೆ ಇನ್ನೆಷ್ಟು ಜನರ ಪ್ರಾಣ ಬಲಿಗೆ ಕಾಯುತ್ತಿದೆಯೋ ಗೊತ್ತಿಲ್ಲ ಎಂದು ವಿಷಾದಿಸಿದ್ದಾರೆ.

ದಿನೇ ದಿನೇ ಅಳಿವೆ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ವರ್ಷವಂತೂ ಎಂದೂ ಕಂಡರಿಯದ ಸಮಸ್ಯೆ ಎದುರಿಸುತ್ತಿದ್ದೇವೆ. ಇಲಾಖೆಯವರು ತಕ್ಷಣ ಜಾಗ್ರತರಾಗದಿದ್ದರೆ ಹೂಳಿನಿಂದ ಅಳಿವೆ ಬಾಯಿ ಸಂಪೂರ್ಣ ಮುಚ್ಚಿ ಹೋಗುವ ಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ. ಈ ವರ್ಷ 15 ದಿನ ತಡವಾಗಿ ಮೀನುಗಾರಿಕೆ ಆರಂಭಿಸಿದು,್ದ ಮೊದಲ ದಿನವೇ 3 ಬೋಟ್‌ಗಳು ಹೂಳಿನಲ್ಲಿ ಸಿಲುಕಿ ಅಪಾಯ ಉಂಟಾಗಿತ್ತು ಎಂದು ವಿವರಿಸಿದ್ದಾರೆ. ಒಂದು ಮಗು ಕೊಳವೆ ಬಾವಿಗೆ ಬಿದ್ದರೆ ಲಕ್ಷಾಂತರ ರೂ. ಖರ್ಚು ಮಾಡಿ ಬಚಾವು ಮಾಡುತ್ತಾರೆ. ಬೆಳೆಗಾರರಿಗೆ, ತೋಟಗಾರರಿಗೆ, ಕೈಗಾರಿಕೆಗೆ ಸಮಸ್ಯೆ ಕಂಡುಬಂದರೆ ಅವರ ನೆರವಿಗೆ ಧಾವಿಸುತ್ತಾರೆ. ಅವರ ಸಾಲ ಮನ್ನಾ ಮಾಡಿ ಹೊಸ ಸಾಲ ನೀಡುತ್ತಾರೆ. ಸಬ್ಸಿಡಿ ನೀಡಿ ಉತ್ತೇಜಿಸಿ ಅವರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸುತ್ತಾರೆ. ಆದರೆ ಮೀನುಗಾರರ ಬಗ್ಗೆ ಮಾತ್ರ ಏಕೆ ಮಲತಾಯಿ ಧೋರಣೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಮತ್ಸ್ಯ ಕ್ಷಾಮ ಸಂಭವಿಸಿದರೆ ಯಾರೂ ಸಹ ಮೀನುಗಾರರಿಗೆ ಪರಿಹಾರ ನೀಡಲು, ಸಾಂತ್ವನ ಹೇಳಲು ಬರುವುದಿಲ್ಲ. ಸಮುದ್ರದಲ್ಲಿ ಮೀನು ದೊರೆಯದೆ, ಸಾಲಕ್ಕೆ ಕಂತು ಕಟ್ಟಲು ಕಾಸು ಇಲ್ಲದೇ ಮೀನುಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಯಾರೂ ನೆರವಿಗೆ ಧಾವಿಸುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡರೆ ಅದು ದೊಡ್ಡ ಸುದ್ದಿಯಾಗುವುದಿಲ್ಲ ಎಂದು ಮನವಿಯಲ್ಲಿ ಆಪಾದಿಸಿದ್ದಾರೆ.

 ಉದ್ದೇಶಪೂರ್ವಕವಾಗಿ ಅಳಿವೆ ಸಮಸ್ಯೆಯನ್ನು ಜೀವಂತವಾಗಿಡಲಾಗಿದೆಯೇ ಅಥವಾ ಕೆಲವರಿಗೆ ಈ ಅಳಿವೆ ಸಮಸ್ಯೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆಯೇ ಎಂಬ ಅನುಮಾನ ಉಂಟಾಗಿದೆ ಎಂದಿದ್ದಾರೆ. ಪಿಳ್ಳೆ ನೆಪಗಳನ್ನು ಬದಿಗೊತ್ತಿ, ಕಣ್ಣೊರೆಸುವ ತಂತ್ರಗಳನ್ನು ಮಾಡದೇ ಅಧಿಕಾರಿಗಳು ಅಳಿವೆ ಸಮಸ್ಯೆಯನ್ನು ಸರಕಾರಕ್ಕೆ ಮನದಟ್ಟು ಮಾಡಿಕೊಡುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೀನುಗಾರರು ನಿಮ್ಮ ಹತ್ತಿರ ಸಾಲ ಕೇಳುತ್ತಿಲ್ಲ. ಮತ್ಸ್ಯ ಕ್ಷಾಮದಿಂದ ಕಂಗೆಟ್ಟಿದ್ದು ಪರಿಹಾರ ಕೊಡಿಸಿ ಎಂದು ಕೇಳುತ್ತಿಲ್ಲ. ಆದರೆ ನಮ್ಮ ಜೀವನ ನಿರ್ವಹಣೆಯ ಹೆಬ್ಬಾಗಿಲು ಆಗಿರುವ ಅಳಿವೆ ಬಾಗಿಲಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಹೇಳಿದ್ದಾರೆ.

ಹೋರಾಟದಲ್ಲಿ ಪರ್ಶಿಯನ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ಮಂಕಿಯ ಮೋಹನ ಖಾರ್ವಿ, ಕರಾವಳಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮೋಹನ ಮಂಜುನಾಥ ತಾಂಡೇಲ, ಫೆಲಿಕ್ಸ್ ಫೆರ್ನಾಂಡಿಸ್, ಅಬ್ಬಾಸ್ ಸಾಬ್, ಸಗಟು ಮೀನುಗಾರರ ಸಂಘದ ಅಧ್ಯಕ್ಷ ಗಣಪತಿ ಮೇಸ್ತ, ಬಾಷಾ ಅಹ್ಮದ್ ಪಟೇಲ, ಗೋವಿಂದ ತಾಂಡೇಲ, ಜಗದೀಶ ತಾಂಡೇಲ್ ಟೊಂಕಾ ಮತ್ತಿತರರು ಪಾಲ್ಗೊಂಡಿದ್ದರು. ಯಾವ ಸರಕಾರ ಬಂದರೂ ಮೀನುಗಾರರ ಸಮಸ್ಯೆ ಮಾತ್ರ ಬಗೆಹರಿದಿಲ್ಲ .ತಡೆಗೋಡೆ ನಿರ್ಮಿಸದೇ ಇರುವುದರಿಂದ ಮೀನುಗಾರಿಕೆಗೆ ಹೋಗಲು ಅಸಾಧ್ಯವಾಗಿ ನಷ್ಟವಾಗುತ್ತಿದೆ.

<

ರಾಮಚಂದ್ರ, ಟ್ರೋಲ್ ಬೋಟ್ ಸಂಘದ ಅಧ್ಯಕ್ಷ ಹೂ   

<ಳಿನ ಸಮಸ್ಯೆಯಿಂದ ಬೋಟುಗಳು ದುರಂತಕ್ಕೀಡಾಗಿವೆ. ಅನೇಕರು ನಿರ್ಗತಿಕರಾಗಿದ್ದಾರೆ. ಅಮಾಯಕರ ಜೀವ ಬಲಿಯಾಗಿದೆ. ಸರಕಾರ ಕೂಡಲೇ ಶಾಶ್ವತ ತಡೆಗೋಡೆ ನಿರ್ಮಿಸಬೇಕು. ವಿವನ್ ಫೆರ್ನಾಂಡಿಸ್ ಮಾಲಕರ ಸಂಘದ ಕಾರ್ಯದರ್ಶಿ

ಕಲ ಮಕ್ಕಳ ಕೂಗು ಸರಕಾರವನ್ನು ಮುಟ್ಟಬೇಕು. ತಡೆಗೋಡೆ ನಿರ್ಮಿಸ ಬೇಕು ಎಂದು ಮೀನುಗಾರರು ನಿರಂತ ರವಾಗಿ ಹೋರಾಟ ನಡೆಸುತ್ತಿದ್ದರೂ ಆಡಳಿತವರ್ಗ ಸ್ಪಂದಿಸುತ್ತಿಲ್ಲ. ಅನೇಕರು ಸಮುದ್ರ ದಲ್ಲಿ ಜೀವ ಕಳೆದುಕೊಂಡಿ್ದಾರೆ. ಎಷ್ಟೋ ಮಹಿಳೆಯರು ವಿಧವೆಯಾಗಿದ್ದಾರೆ. ಸರಕಾರ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತದೆ. ಆದರೆ ಜೀವ ಹಾನಿಯಾಗುವುದನ್ನು ತಪ್ಪಿಸಲು ತಡೆಗೋಡೆ ನಿರ್ಮಾಣ ಮಾತ್ರ ಮಾಡುತ್ತಿಲ್ಲ.

             < ಉಮೇಶ ಮೇಸ್ತ, ಮೀನುಗಾರ

ಸ                                                              

< ಮುದ್ರದಲ್ಲಿ ಮೀನುಗಾರರ ಆರ್ತನಾದ ಸರಕಾ ರಕ್ಕೆ ಕೇಳುತ್ತಿಲ್ಲ. ನಮಗೆ ಮೀನುಗಾರಿಕೆ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಒಂದು ತುತ್ತು ಅನ್ನ ಕ್ಕಾಗಿ ಸಾವಿನ ಜೊತೆಗೆ ಹೋರಾಡುತ್ತೇವೆ. ರಾಜೇಶ ತಾಂಡೇಲ ಮೀನುಗಾರ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X