ಬೈಕ್‌ಗಳ ನಡುವೆ ಢಿಕ್ಕಿ: ಓರ್ವ ಮೃತ್ಯು

ಮಂಗಳೂರು, ಆ. 31: ಬೈಕ್‌ವೊಂದು ಇನ್ನೊಂದು ಬೈಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ನಡೆದಿದೆ.
ಬಜ್ಪೆ ಬಳಿಯ ನಿವಾಸಿ ಪ್ರದೀಪ್ ಕುಮಾರ್ ಎಂಬವರು ಮಿಜಾರಿನಿಂದ ಕೈಕಂಬದ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಪ್ರದೀಪ್ ಕುಮಾರ್ ಚಲಾಯಿಸುತ್ತಿದ್ದ ಬೈಕ್ ಗಂಜಿಮಠದಲ್ಲಿರುವ ರಾಜ್ ಅಕಾಡಮಿ ಶಾಲೆ ಬಳಿ ತಲುಪುವಾಗ ಎದುರಿನಿಂದ ಅತೀ ವೇಗವಾಗಿ ಬರುತ್ತಿದ್ದ ಬೈಕ್ ಪ್ರದೀಪ್ ಅವರ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಎರಡೂ ಬೈಕ್‌ಗಳು ರಸ್ತೆಗಪ್ಪಳಿಸಿದ್ದು, ಗಂಭೀರ ಗಾಯಗೊಂಡ ಪ್ರದೀಪ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ವೈದ್ಯರು ಪ್ರದೀಪ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗಣೇಶ್ ಎಂಬವರು ನೀಡಿದ ದೂರಿನನ್ವಯ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





