‘ಗಿರಿಮಾನವ’ ಮಾಂಝಿ ಗೌರವಾರ್ಥ ಜೆಥಿಯಾನ್ ಗ್ರಾಮಕ್ಕೆ ರೈಲು ಮಾರ್ಗ
ಪ್ರಭು ಚಿಂತನೆ
ಹೊಸದಿಲ್ಲಿ, ಆ.31: ಬಿಹಾರ ದಲ್ಲಿ ‘ಗಿರಿ ಮಾನವ’ ಎಂದೇ ಜನಪ್ರಿಯರಾಗಿರುವ ದಶರಥ ಮಾಂಝಿ ಎಂಬವರಿಗೆ ಸೂಕ್ತ ಗೌರವ ನೀಡುವ ಉದ್ದೇಶದಿಂದ ಅವರ ಗೆಹ್ಲೋರ್ ಗ್ರಾಮಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು ರೈಲ್ವೆ ಸಚಿವ ಸುರೇಶ್ ಪ್ರಭು ಯೋಜನೆ ಹಾಕಿದ್ದಾರೆ.
ಮಾಂಝಿಯವರ ಗ್ರಾಮವು ಈಗ ಗಯಾದ ನೆರೆಯ ಪಟ್ಟಣಗಳು ಹಾಗೂ ಗ್ರಾಮಗಳೊಂದಿಗೆ ಸಂಪರ್ಕ ಪಡೆದಿದ್ದರೂ, ಜೆಥಿಯಾನ್‌ಗೆ ಅತಿ ಹತ್ತಿರದ ರೈಲು ನಿಲ್ದಾಣ ಈಗಲೂ 8 ಕಿ.ಮೀ. ದೂರದಲ್ಲಿದೆ.
ನಾಲ್ಕು ದಶಕಗಳಷ್ಟು ಹಿಂದೆ, ಬೆಟ್ಟವೊಂದನ್ನು ಕೊರೆದು ರಸ್ತೆ ನಿರ್ಮಿಸುವ ತನ್ನ ಕನಸನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಮನವರಿಕೆ ಮಾಡುವುದಕ್ಕಾಗಿ ದಿಲ್ಲಿಗೆ ಪ್ರಯಾಣಿಸಲು ಹಣ ವಿಲ್ಲದ ಕಾರಣ ಮಾಂಝಿ ಗಯಾದಿಂದ ದಿಲ್ಲಿಯ ವರೆಗೆ ರೈಲು ಹಳಿಗಳ ಗುಂಟ ನಡೆದೇ ಹೋಗಿದ್ದರೆಂದು ಹೇಳಲಾಗುತ್ತಿದೆ.
ಬಳಿಕ ಮಾಂಝಿ, 22 ವರ್ಷಗಳ ಕಾಲ ಕಲ್ಲುಳಿ ಮತ್ತು ಹಾರೆಗಳಿಂದ ಬೆಟ್ಟವನ್ನು ಕೊರೆದು ಒಬ್ಬಂಟಿಯಾಗಿ ರಸ್ತೆ ನಿರ್ಮಿಸುವಲ್ಲಿ ಸಫಲರಾಗಿದ್ದರು. ಆ ರಸ್ತೆಯೀಗ ಅವರ ಗ್ರಾಮವನ್ನು ಗಯಾಕ್ಕೆ ಸಂಪರ್ಕಿಸುತ್ತಿದೆ.
ಅಲ್ಲಿಗೆ ರೈಲು ಮಾರ್ಗ ನಿರ್ಮಾಣ ಸಾಧ್ಯವೇ ಎಂಬ ಕುರಿತು ಪರಿಶೀಲಿಸು ವೆನೆಂದು ಪ್ರಭು ಮಂಗಳವಾರ ಘೋಷಿಸಿದ್ದಾರೆಂದು ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ. ಆ ರಸ್ತೆಗೆ ಮಾಂಝಿಯವರ ಹೆಸರಿರಿಸುವ ಚಿಂತನೆ ಯನ್ನೂ ರೈಲ್ವೆ ಸಚಿವರು ಮಾಡಿದ್ದಾರೆಂದು ವರದಿ ಹೇಳಿದೆ.





