ಬೈಕ್ ಢಿಕ್ಕಿ: ಮಹಿಳೆ ಮೃತ್ಯು
ಉಡುಪಿ, ಆ.31: ಗುಂಡಿಬೈಲು ನಾಗಬನ ಎಂಬಲ್ಲಿ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ಜಹರುನ್ನಿಸಾ ಎಂಬವರು ಮೃತಪಟ್ಟಿದ್ದಾರೆ.
ಆ.29ರಂದು ಸಂಜೆ ವೇಳೆ ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ ಹೋಗುತ್ತಿದ್ದ ಬೈಕ್ ರಸ್ತೆ ಬದಿ ನಿಂತಿದ್ದ ಜಹರುನ್ನೀಸಾರಿಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರ ವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಆ.30ರಂದು ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
Next Story





