ಕಾಸರಗೋಡು: ಸೆ.2ರಂದು ನಡೆಯಬೇಕಿದ್ದ ಪರೀಕ್ಷೆಗಳು ಸೆ.8ಕ್ಕೆ ಮುಂದೂಡಿಕೆ

ಕಾಸರಗೋಡು, ಸೆ.1: ರಾಷ್ಟ್ರೀಯ ಮುಷ್ಕರದ ಹಿನ್ನಲೆಯಲ್ಲಿ ಸೆ.2ರಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಪರೀಕ್ಷೆ ಸೆ . 8 ರಂದು ನಡೆಯಲಿದೆ.
ಕೇರಳದಲ್ಲಿ 1ನೆ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಆ.30ರಂದು ಆರಂಭಗೊಂಡಿದ್ದು, ಸೆ.7ರಂದು ಮುಕ್ತಾಯಗೊಳ್ಳಬೇಕಿತ್ತು.
ಆದರೆ ಬಂದ್ ಹಿನ್ನೆಲೆಯಲ್ಲಿ ಸೆ.2ರ ಪರೀಕ್ಷೆಯನ್ನು ಸೆ.8ರಂದು ನಡೆಸಲು ತೀರ್ಮಾನಿಸಲಾಗಿದೆ.ಈ ಹಿನ್ನೆಲೆಯಲ್ಲಿ ಸೆ.8ರಂದು ಪರೀಕ್ಷೆಗಳು ಕೊನೆಗೊಳ್ಳಲಿದ್ದು, ಬಳಿಕ ಶಾಲಾ-ಕಾಲೇಜುಗಳಿಗೆ 10 ದಿನಗಳ ಓಣಂ ರಜೆ ಲಭಿಸಲಿದೆ.
Next Story





