ದುಬೈ: ಚಾಲಕರಹಿತ ವಾಹನ ಪ್ರಾಯೋಗಿಕ ಓಡಾಟಕ್ಕೆ ಸಜ್ಜು

ದುಬೈ,ಸೆ.1: ಆರ್‌ಟಿಐಯ ಚಾಲಕರಹಿತ ವಾಹನ ರಸ್ತೆಯಲ್ಲಿ ಟೆಸ್ಟ್‌ರೈಡ್ ನಡೆಸಲು ಸಿದ್ಧವಾಗಿದೆ. ಬುರ್ಜಖಲೀಫದ ಸಮೀಪ ದುಬೈ ಡೌನ್ ಟೌನ್‌ನ ಮುಹಮ್ಮದ್ ಬಿನ್ ರಾಶಿದ್ ಬುಲವಾಡಿನಲ್ಲಿ ವಿಶೇಷವಾಗಿ ತಯಾರಿಸಿದ 700 ಮೀಟರ್ ರೂಟ್‌ನಲ್ಲಿ ಗುರುವಾರದಿಂದ ಚಾಲಕ ರಹಿತ ವಾಹನದ ಪ್ರಾಯೋಗಿಕ ಓಡಾಟ ಆರಂಭವಾಗಲಿದೆ ಎಂದು ವರದಿಯೊಂದು ತಿಳಿಸಿದೆ.
ಪ್ರಾಯೋಗಿಕ ಓಡಾಟ ಯಶಸ್ವಿಯಾದರೆ ಬೇರೆಡೆಗಳಲ್ಲಿಯೂ ಚಾಲಕ ರಹಿತವಾಹನಗಳ ಓಡಾಟವನ್ನು ವಿಸ್ತರಿಸಲಾಗುವುದೆಂದು ಆರ್‌ಟಿಐ ಡೈರಕ್ಟರ್ ಜನರಲ್ ಮತಾರ್ ಅಲ್ ತಾಯಿರ್ ಹೇಳಿದ್ದಾರೆ. ಆರ್‌ಟಿಐ 2030ಕ್ಕಾಗುವಾಗ ದುಬೈಯ ಒಟ್ಟುವಾಹನಗಳಲ್ಲಿ ಶೇ.25ರಷ್ಟು ಚಾಲಕರಹಿತ ವಾಹನಗಳ ಓಡಾಟವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ದುಬೈಯನ್ನುಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವ ಅಂಗವಾಗಿ ಒಂದು ತಿಂಗಳ ಹಿಂದೆ ಚಾಲಕ ರಹಿತ ವಾಹನಗಳನ್ನು ಆರ್‌ಟಿಐ ಪ್ರಸ್ತುತಪಡಿಸಿದೆ. ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನ ಹಾಲ್‌ಗಳ ನಡುವೆ ಚಾಲಕ ರಹಿತ ವಾಹನಗಳು ಪ್ರಥಮವಾಗಿ ಸರ್ವೀಸ್ ನಡೆಸಲು ಸಜ್ಜಾಗಿವೆ.ಹತ್ತುಮಂದಿ ಪ್ರಯಾಣಿಸಬಹುದಾದ ಈವಾಹನ ಪೂರ್ವ ನಿಗದಿತ ದಾರಿಯಲ್ಲಿ ಮಾತ್ರ ಸಂಚರಿಸಲಿದೆ ಎಂದು ವರದಿತಿಳಿಸಿದೆ.





