ಆಗುಂಬೆ ಬಳಿ ಬಸ್-ಕಾರು ಢಿಕ್ಕಿ: ಢಿಕ್ಕಿಯ ರಭಸಕ್ಕೆ 3 ಬಾರಿ ಪಲ್ಟಿಯಾದ ಬಸ್
25ಕ್ಕೂ ಅಧಿಕ ಮಂದಿಗೆ ಗಾಯ

ಶಿವಮೊಗ್ಗ, ಸೆ.1: ಖಾಸಗಿ ಬಸ್ ಮತ್ತು ಕಾರೊಂದರ ನಡುವೆ ಅಪಘಾತ ಸಂಭವಿಸಿ ಸುಮಾರು 25ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಆಗುಂಬೆ ಠಾಣಾ ವ್ಯಾಪ್ತಿಯ ಮೇಗ್ರಳ್ಳಿ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಶಿವಮೊಗ್ಗದಿಂದ ಮಂದಾರ್ತಿ ಮಾರ್ಗವಾಗಿ ಕುಂದಾಪುರದತ್ತ ತೆರಳುತ್ತಿದ್ದ ಖಾಸಗಿ ಬಸ್ ಮೇಗ್ರಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ರಭಸಕ್ಕೆ ಖಾಸಗಿ ಬಸ್ ಮೂರು ಬಾರಿ ಪಲ್ಟಿಯಾಗಿದ್ದು, ನಜ್ಜುಗುಜ್ಜಾಗಿದೆ.
ಬಸ್‌ನಲ್ಲಿ ಸುಮಾರು 25ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Next Story





