ಕ್ರಿಶ್ 4 ರ ಚಿತ್ರಕತೆ ಬರೆಯಲು ರಾಕೇಶ್ ರೋಶನ್ ಗೆ ಸಹಕರಿಸುತ್ತಿರುವ ಇಬ್ಬರು ಯಾರು ಗೊತ್ತೇ ?

ಮುಂಬೈ,ಸೆ.1: ಹೃತಿಕ್ ರೋಶನ್ ಅವರ ಸೂಪರ್ ಹಿಟ್ ಕ್ರಿಶ್ ಸರಣಿಯ ‘ಕ್ರಿಶ್ 4’ ಚಿತ್ರಕ್ಕೆ ರಾಕೇಶ್ ರೋಶನ್ ಅವರು ಚಿತ್ರಕತೆಯನ್ನು ಹೆಣೆಯುತ್ತಿದ್ದಾರೆ. ಕಾಮಿಕ್ ಪುಸ್ತಕದ ಸೂಪರ್ ಹೀರೋ ಪಾತ್ರಗಳನ್ನೇ ಮತ್ತೆ ಪರದೆಯ ಮೇಲೆ ತರಲಿದ್ದಾರೆ.
ಈ ಬಾರಿಯ ಚಿತ್ರಕತೆ ತಯಾರಿಯ ವಿಶೇಷವೇನೆಂದರೆ, ಇದಕ್ಕೆ ಸಹಕರಿಸುತ್ತಿರುವವರು ಅವರ ಮೊಮ್ಮಕ್ಕಳು! ರಾಕೇಶ್ ರೋಶನ್ ಅವರ ಮೊಮ್ಮಕ್ಕಳಾದ (ಹೃತಿಕ್ ರೋಶನ್ ಮಕ್ಕಳು) ರೆಹಾನ್(10), ರಿದಾನ್(8) ಅವರು ಚಿತ್ರಕತೆಗೆ ಹೊಸ ಐಡಿಯಾಗಳನ್ನು ನೀಡಿ ಚಿತ್ರಕತೆ ಬರೆಯಲು ಸಹಕರಿಸುತ್ತಿದ್ದಾರೆ. ಇವರು ಹಾಲಿವುಡ್ ನ ಖ್ಯಾತ ಚಿತ್ರಗಳಾದ ‘ಬ್ಯಾಟ್ ಮನ್’, ‘ಕ್ಯಾಪ್ಟನ್ ಅಮೆರಿಕ’ ಸರಣಿ ಹಾಗೂ 'ಸ್ಪೈಡರ್ ಮ್ಯಾನ್' ಚಿತ್ರಗಳ ದೊಡ್ಡ ಫ್ಯಾನ್ ಗಳಾಗಿದ್ದಾರೆ. ರಾಕೇಶ್ ತನ್ನ ಕತೆಯ ಸರಣಿಯಲ್ಲಿ ಮೊಮ್ಮಕ್ಕಳ ಹೊಸ ಸೂಪರ್ ಹೀರೋ ಕತೆಗಳ ಆಲೋಚನೆಗಳನ್ನು ಕತೆಯಲ್ಲಿ ಅಳವಡಿಸಿಕೊಳ್ಳಲಿದ್ದಾರೆ.
Next Story





