ಲಿಂಗ ಪತ್ತೆ ಕಾಯ್ದೆ ತಿದ್ದ್ದುಪಡಿಗೆ ಆಗ್ರಹಿಸಿ ಧರಣಿ

ಚಿಕ್ಕಮಗಳೂರು, ಸೆ.1: ಪ್ರಸವ ಪೂರ್ವ ಮತ್ತು ಗಭರ್ ಪೂರ್ವ ಲಿಂಗ ಪತ್ತೆ ಕಾಯ್ದೆ ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಸೆ.1ರಂದು ಇಂಡಿಯನ್ ರೆಡಿಯೊಲೋಜಿಕಲ್ ಮತ್ತು ಇಮೇಜಿಂಗ್ ಅಸೋಸಿಯೇಶನ್ ವತಿಯಿಂದ ದೇಶಾದ್ಯಂತ ಎಕ್ಸರೆ, ಸಿಟಿ ಸ್ಕಾನಿಂಗ್, ಎಂಆರ್ ಮತ್ತು ಅಲ್ಟ್ರಾ ಸೌಂಡ್ ಸ್ಕಾನಿಂಗ್ ಕೇಂದ್ರಗಳು ಬಂದ್ ನಡೆಸಿ ಧರಣಿ ನಡೆಸಿತು.
ಇಂದು ಈ ಕೇಂದ್ರಗಳಲ್ಲಿ ದೈನಂದಿನ ಸ್ಕಾನಿಂಗ್ ಮಾಡುವುದಿಲ್ಲ. ದೇಶದಲ್ಲಿ ಗಂಡು-ಹೆಣ್ಣು ಅನುಪಾತದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಗರ್ಭಿಣಿಯರ ಸ್ಕಾನಿಂಗ್ ಮಾಡಿಸಿ ಹೆಣ್ಣು ಭ್ರೂಣ ಎಂದು ತಿಳಿದಲ್ಲಿ ಹತ್ಯೆ ಮಾಡುತ್ತಾರೆ ಎಂದು 1996 ರಲ್ಲಿ ಕಾಯ್ದೆ ಜಾರಿಗೆ ತಂದಿದ್ದು ಮುಂದೆ ಅದರಲ್ಲಿ ತಿದ್ದುಪಡಿ ಮಾಡಲಾಗಿದೆ.
ಹೆಣ್ಣು ಮಕ್ಕಳನ್ನು ಸಂರಕ್ಷಿಸುವ ಕಾಯ್ದೆಗೆ ಸಹಮತವಿದ್ದರೂ ಇದನ್ನೆ ಹಿಡಿದುಕೊಂಡು ಸತಾಯಿಸುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಸಾಮಾನ್ಯವಾಗಿ ಹೆಚ್ಚಿನ ಎಲ್ಲ ಕಾಯಿಲೆಗಳ ತಪಾಸಣೆಗೆ ಮಾತ್ರ ಇರುವುದು ಎಂದು ಭಾವಿಸುತ್ತಾರೆ. ಗೌನ್(ಏಪ್ರಾನ್) ಧರಿಸಿ ಸ್ಕಾನ್, ಫಾರಂ ಎಫ್ ತುಂಬಿಸಿಲ್ಲ ಎಂಬ ಕಾರಣಕ್ಕೆ ದಂಡ ಹಾಗೂ ಯಂತ್ರ ಜಪ್ತಿ ಮಾಡುತ್ತಾರೆ. ಇದನ್ನೆಲ್ಲಾ ವಿರೋಧಿಸಿ ಅನಿವಾರ್ಯವಾಗಿ ಒಂದು ದಿನ ಮುಷ್ಕರ ನಡೆಸುತ್ತಿದ್ದು, ಸರಕಾರ ಸ್ಪಂದಿಸದಿದ್ದಲ್ಲಿ ಮುಂದೆ ನಿರಂತರ ಮುಷ್ಕರ ನಡೆಯಲಿದೆ ಎಂದು ಧರಣಿನಿರತರು ಒತ್ತಾಯಿಸಿದ್ದಾರೆ.
ಈ ಸಂದಭರ್ದಲ್ಲಿ ಡಾ. ಶಶಿಧರ್, ಡಾ. ರವಿಶಂಕರ್, ಡಾ. ಪದ್ಮಾವತಿ.ಸಿ.ಕೆ, ಡಾ. ರಾಮಚಂದ್ರ, ಡಾ. ಶುಭಾ ವಿಜಯ್, ಡಾ. ದಿವಾಕರ್, ಡಾ. ಛಾಯಾ ಮಲ್ಲಿಕಾರ್ಜುನ, ಡಾ. ವೀಣಾ ಸ್ವಾಮಿ, ಡಾ. ಭಾಗ್ಯಾ ಕಾರ್ತಿಕ್, ಡಾ. ನಂದಾ ಸುಂದರೇಶ್, ಡಾ. ಚಂದ್ರಶೇಖರ್ ಹಾಗೂ ಡಾ.ಮೀರಾ ಮತ್ತಿತರು ಹಾಜರಿದ್ದರು.







