Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಗೋರಕ್ಷಕರಿಗಿಂತ ಚಂಬಲ್ ಕಣಿವೆ ಡಕಾಯಿತರೇ...

ಗೋರಕ್ಷಕರಿಗಿಂತ ಚಂಬಲ್ ಕಣಿವೆ ಡಕಾಯಿತರೇ ಲೇಸು!

ಬೆಚ್ಚಿಬೀಳಿಸಿದ ಮಾಜಿ ಡಕಾಯಿತೆಯ ಬಿಚ್ಚುನುಡಿ

ಧೀರೇಂದ್ರ ಕೆ.ಝಾಧೀರೇಂದ್ರ ಕೆ.ಝಾ1 Sept 2016 11:15 PM IST
share
ಗೋರಕ್ಷಕರಿಗಿಂತ ಚಂಬಲ್ ಕಣಿವೆ ಡಕಾಯಿತರೇ ಲೇಸು!

ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಅಕಾರ ವಹಿಸಿಕೊಂಡ ತಕ್ಷಣ ಗೋರಕ್ಷಕ ದಳ ಚಂಬಲ್ ಕಣಿವೆಯ ಮಾಜಿ ಡಕಾಯಿತೆ ರೇಣು ಯಾದವ್ ಅವರಿಗೆ ಗಾಳ ಹಾಕಿತು. ರಾಜ್ಯದಲ್ಲಿ ಗೋಸಂರಕ್ಷಣೆ ಚಟುವಟಿಕೆ ಚುರುಕುಗೊಳಿಸುವ ಸಲುವಾಗಿ ಅವರನ್ನು ಉತ್ತರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿತು.

ಇದೇ ವೇಳೆಗೆ ಖ್ಯಾತಿ ಗಳಿಸುವ ಹುಚ್ಚಿನಿಂದ ಯಾದವ್, ಗೋಸಾಗಾಟ ವಿರುದ್ಧ ಇಟವಾ- ಔರಿಯಾ- ಕಾನ್ಪುರ ಪ್ರದೇಶದಲ್ಲಿ ನಿರಂತರ, ಭೀಕರ ಹಾಗೂ ಮಿಂಚಿನ ದಾಳಿ ನಡೆಸಿದರು. ಆದರೆ ಎರಡೇ ವರ್ಷ. ರೇಣು ಭ್ರಮ ನಿರಸನಗೊಂಡು ಗೋ ಸಂರಕ್ಷಣೆ ಚಟುವಟಿಕೆಯಿಂದ ಸಂಪೂರ್ಣ ವಿಮುಖರಾದರು.
‘‘ಈ ಗೋರಕ್ಷಕರು ಕಣಿವೆಗಳ ಕೊಲೆಗಡುಕರಿಗಿಂತ ಕೆಟ್ಟವರು’’ ಎನ್ನುವುದು ರೇಣು ಉದ್ಗಾರ. ಔರಿಯಾ ಜಿಲ್ಲೆಯ ಕಸಬಾ ಜಾನ ಗ್ರಾಮದಲ್ಲಿ ಈಕೆಯ ವಾಸ. ‘‘ನೀವು ಅವರನ್ನು ನಂಬುವಂತೆಯೇ ಇಲ್ಲ. ಮೂರ್ಖಳಂತೆ ನಾನು ಅಪಾಯವನ್ನು ಮೈಮೇಲೆ ಎಳೆದುಕೊಂಡು ಹಲವು ದಾಳಿಗಳನ್ನು ನಡೆಸಿದೆ. ಆದರೆ ಗೋರಕ್ಷಕರಿಗೆ ಹಾಗೂ ಪೊಲೀಸರಿಗೆ ಜಾನುವಾರು ಸಾಗಾಟಗಾರರು ಪ್ರತಿಬಾರಿಯೂ ಲಂಚ ನೀಡುವುದರೊಂದಿಗೆ ಪ್ರಕರಣ ಅಂತ್ಯವಾಗುತ್ತಿತ್ತು. ಪೊಲೀಸರ ಜತೆ ಕಳ್ಳನಂಟು ಹೊಂದಿದ ಅವರು ಈ ರಹಸ್ಯವನ್ನು ಬಹಳಷ್ಟು ಕಾಲ ನನ್ನಿಂದ ಮುಚ್ಚಿಟ್ಟಿದ್ದರು’’ ಎಂದು ವಿವರಿಸುತ್ತಾರೆ.
ರೇಣು, ಚಂಬಲ್ ಕಣಿವೆಯಲ್ಲಿ ಭೀತಿ ಹುಟ್ಟಿಸಿದ್ದ ಕುಖ್ಯಾತ ಡಕಾಯಿತ ಚಂದನ್ ಯಾದವ್ ಗ್ಯಾಂಗ್‌ನಲ್ಲಿದ್ದವರು. 2005ರಲ್ಲಿ ಚಂದನ್ ಯಾದವ್ ಹಾಗೂ ಆತನ ಕೆಲ ಸಹಚರರು ಪೊಲೀಸ್ ಚಕಮಕಿ ಯಲ್ಲಿ ಹತರಾದ ಬಳಿಕ, ರೇಣು ಪೊಲೀಸರಿಗೆ ಶರಣಾಗಿದ್ದರು. ‘‘ಏಳು ವರ್ಷ, ಮೂರು ತಿಂಗಳು, 15 ದಿನ ಕಾಲ ನಾನು ಜೈಲಿನಲ್ಲಿದ್ದೆ. ಹೊರ ಬಂದ ಬಳಿಕ, ಸಮಾಜವಾದಿ ಪಕ್ಷದ ಪರವಾಗಿ ಕೆಲಸ ಮಾಡಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಪರವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ಮಾಡಿದೆ’’ ಎಂದು ವಿವರಿಸುತ್ತಾರೆ.

ಪೊಲೀಸರ ಜತೆ ಕಳ್ಳನಂಟು
ಲೋಕಸಭೆ ಚುನಾವಣೆ ಕಳೆದ ಕೆಲ ತಿಂಗಳ ಬಳಿಕ ಅವರನ್ನು ಗೋರಕ್ಷಾ ದಳದ ರಾಜ್ಯ ಅಧ್ಯಕ್ಷ ಶ್ರೀಕೃಷ್ಣ ಪಾಲ್ ಭೇಟಿ ಮಾಡಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಭರವಸೆ ನೀಡಿದರು. ‘‘ಗೋವುಗಳನ್ನು ನಾನು ಪೂಜಿಸುತ್ತೇನೆ. ಆದ್ದರಿಂದ ಆ ಹುದ್ದೆ ಒಪ್ಪಿಕೊಂಡೆ. ಗೋಮಾತೆಯ ಸೇವೆ ಮಾಡಲು ಹಾಗೂ ಸಮಾಜದಲ್ಲಿ ಹೊಸ ಇಮೇಜ್ ಬೆಳೆಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ’’ ಎಂದು ಸಂಘಟನೆ ಸೇರಿದ ಹಿನ್ನೆಲೆ ಬಗ್ಗೆ ಮಾಜಿ ಡಕಾಯಿತೆ ವಿವರ ನೀಡುತ್ತಾರೆ.
‘‘ನಾನು ಕೆಲ ನಿರುದ್ಯೋಗಿ ಯುವಕರನ್ನು ಕಲೆ ಹಾಕಿ ನಿಯತವಾಗಿ ಹಸು ಸಾಗಾಟದ ವಿರುದ್ಧ ದಾಳಿ ಮಾಡಲು ಆರಂಭಿಸಿದೆ. ಪ್ರತಿ ಯಶಸ್ವಿ ಕಾರ್ಯಾಚರಣೆ ಬಳಿಕ ಜಾನುವಾರು ಸಾಗಾಣೆದಾರರು ಹಾಗೂ ವ್ಯಾಪಾರಿಗಳನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದೆವು. ಅವರನ್ನು ಪೊಲೀಸರು ಶಿಕ್ಷಿಸುತ್ತಾರೆ ಎಂಬ ನಂಬಿಕೆಯಿಂದ ಹಾಗೆ ಮಾಡುತ್ತಿದ್ದೆವು. ಆದರೆ ಅದು ಎಂದೂ ಸಂಭವಿಸಲೇ ಇಲ್ಲ. ತೀರಾ ತಡವಾಗಿ ನನಗೆ ಒಂದು ಸತ್ಯ ತಿಳಿಯಿತು. ಗೋರಕ್ಷಕ ದಳದ ಇತರ ಮುಖಂಡರು, ಜಾನುವಾರು ಮಾರಾಟಗಾರರ ಜತೆ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಅಂಥ ವ್ಯಾಪಾರಿಗಳನ್ನು ಪೊಲೀಸರು ಬಿಟ್ಟು ಬಿಡುತ್ತಿದ್ದರು. ಗೋರಕ್ಷಕರು ಹಾಗೂ ಪೊಲೀಸರ ನಡುವಿನ ಕಳ್ಳನಂಟು ಎಷ್ಟು ಗಾಢವಾಗಿದೆ ಎಂದರೆ ಯಾರೂ ಅದನ್ನು ಮುರಿಯಲು ಸಾಧ್ಯವೇ ಇಲ್ಲ’’
ಆದರೆ ತಾವು ಯಾವುದೇ ಪೊಲೀಸರ ಜತೆ ಅಂಥ ನಂಟು ಹೊಂದಿಲ್ಲ ಎಂದು ಪಾಲ್ ಸಮರ್ಥಿಸಿಕೊಳ್ಳುತ್ತಾರೆ. ‘‘ಇದು ಆಧಾರ ರಹಿತ ಆರೋಪ. ನಮ್ಮ ಗುರಿ ಗೋವುಗಳನ್ನು ರಕ್ಷಿಸುವುದು. ಏಕೆಂದರೆ ಗೋಮಾತೆ ಹಿಂದೂ ರಾಷ್ಟ್ರದ ಸಂಕೇತ’’ ಎಂದು ಪಾಲ್ ಸ್ಪಷ್ಟಪಡಿಸುತ್ತಾರೆ.

ರೇಣು ಯಾದವ್ ಗೋಸಂರಕ್ಷಣೆಗೆ ತೀವ್ರವಾಗಿ ಕೆಲಸ ಮಾಡಿದ್ದರು ಎನ್ನುವುದನ್ನು ಪಾಲ್ ಒಪ್ಪಿಕೊಳ್ಳುತ್ತಾರೆ. ‘‘ನಮ್ಮ ಸಂಘಟನೆ ಸೇರಿದ ಬಳಿಕ ಆಕೆ 500 ರಿಂದ 600 ಹಸುಗಳನ್ನು ರಕ್ಷಿಸಿದ್ದಾರೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಆಕೆ ದಿಢೀರನೇ ನಿಷಕ್ರೆಿಯರಾ ಗಿದ್ದಾರೆ. ಆಕೆ ನನಗೆ ದೂರು ನೀಡಬೇಕಿತ್ತು. ಹೇಗಿದ್ದರೂ ಇವೆಲ್ಲ ನಮ್ಮ ಆಂತರಿಕ ಸಮಸ್ಯೆಗಳು. ನಾನು ಅವರ ಜತೆ ಮಾತನಾಡಿ, ಎಲ್ಲವನ್ನೂ ಬಗೆಹರಿಸುತ್ತಿದ್ದೆ’’ ಎನ್ನುವುದು ಪಾಲ್ ವಾದ.
ಆದರೆ ಪಾಲ್ ಹಾಗೂ ಇತರ ಗೋರಕ್ಷಕ ದಳದ ಬಗೆಗಿನ ರೇಣು ದೃಷ್ಟಿಯೇ ಬೇರೆ. ‘‘ಡಾಕ್ಟರ್ ಸಾಬ್ (ಪಾಲ್) ಬಗ್ಗೆ ನನಗೆ ಅಪಾರ ಗೌರವ ಇತ್ತು. ಆದರೆ ಈಗ ಆ ಗೌರವ ಇಲ್ಲ. ಏಕೆಂದರೆ ಅವರು ನನಗೆ ವಂಚಿಸಿದ್ದಾರೆ. ಸದಾ ತಾವು ಸುರಕ್ಷಿತವಾಗಿರುವುದು ಅವರ ತಂತ್ರ ವಾಗಿತ್ತು. ನಮ್ಮ ಯಾವ ದಾಳಿಯಲ್ಲೂ ಅವರು ನಮ್ಮ ಜತೆಗೆ ಇರುತ್ತಿರಲಿಲ್ಲ ಎನ್ನುವುದು ನನಗೆ ಸ್ಪಷ್ಟವಾಗಿ ನೆನಪಿದೆ. ತಳಹಂತದ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಒಂದಲ್ಲ ಒಂದು ಕಾರಣ ನೀಡುತ್ತಿದ್ದರು. ದಾಳಿ ಮುಗಿದ ತಕ್ಷಣ ಅವರು ಪ್ರತ್ಯಕ್ಷರಾಗುತ್ತಿದ್ದರು. ಎಲ್ಲಿಂದ ಅವರು ಠಾಣೆ ಮುಂದೆ ಬರುತ್ತಿದ್ದರೋ ನನಗೆ ಅಚ್ಚರಿಯಾಗುತ್ತಿತ್ತು. ಗೋಸಂರಕ್ಷಣೆಯ ಉಳಿದ ಭಾಗವನ್ನು ಅವರು ನೋಡಿ ಕೊಳ್ಳುತ್ತಿದ್ದರು’’
ಇದರಿಂದ ರೇಣು ಯಾದವ್ ಅವರ ಅಂತರಾಳ ಬದಲಾಗಿದೆ ಎಂಬ ಅರ್ಥವಲ್ಲ. ಗೋಸಂರಕ್ಷಣೆ ಹೆಸರಿನಲ್ಲಿ ತಾನು ಮಾಡಿದ ಕಾರ್ಯಾಚರಣೆಯಲ್ಲಿ ಯಾವ ತಪ್ಪೂ ಇಲ್ಲ ಎಂಬ ಅಭಿಮತ ಅವರದ್ದು. ಅಥವಾ ಗೋಸಂರಕ್ಷಣೆಯ ಮೂಲಕ, ಭಾರತವನ್ನು ಹಿಂದೂರಾಷ್ಟ್ರವಾಗಿ ಪರಿವರ್ತಿಸುವ ರಾಜಕೀಯ ಸಿದ್ಧಾಂತವನ್ನು ಬಲಗೊಳಿಸುತ್ತಿದ್ದೇನೆ ಎಂಬ ಭಾವನೆಯೂ ಅವರಲ್ಲಿ ಎಂದೂ ಬಂದಿರಲಿಲ್ಲ. ತೀರಾ ಪವಿತ್ರ ಎಂದು ಪರಿಗಣಿಸುವ ಗೋಮಾತೆಯನ್ನು ರಕ್ಷಿಸುವ ಹೆಸರಿನಲ್ಲಿ ಇಷ್ಟೊಂದು ಕಳ್ಳಾಟ ನಡೆಯುತ್ತದೆ ಎಂಬ ಕಾರಣವೇ ಅವರ ಸಿಟ್ಟಿನ ಮೂಲ. ಆ ಕ್ರೋಧ ಅವರ ಹೃದಯದಲ್ಲೇ ಬಲವಾಗಿ ಬೇರೂರಿದೆ. ಇದು ಗೋರಕ್ಷಾ ದಳ ಬಗೆಗಿನ ಅವರ ಭ್ರಮನಿರಸನಕ್ಕೆ ಕಾರಣವೂ ಆಗಿದೆ.

 

share
ಧೀರೇಂದ್ರ ಕೆ.ಝಾ
ಧೀರೇಂದ್ರ ಕೆ.ಝಾ
Next Story
X