Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೊಗೆಯಿಂದ ಮುಕ್ತಿ ನೀಡುವ ಅದ್ಭುತ...

ಹೊಗೆಯಿಂದ ಮುಕ್ತಿ ನೀಡುವ ಅದ್ಭುತ ಇ-ರಿಕ್ಷಾ

ಸಪ್ನಾ ಗೋಪಾಲ್ಸಪ್ನಾ ಗೋಪಾಲ್1 Sept 2016 11:18 PM IST
share
ಹೊಗೆಯಿಂದ ಮುಕ್ತಿ ನೀಡುವ ಅದ್ಭುತ ಇ-ರಿಕ್ಷಾ

ದೇಶದ ನಗರಗಳಲ್ಲೆಲ್ಲ ಆತಂಕಕಾರಿ ಪ್ರಮಾಣದ ಮಾಲಿನ್ಯದ್ದೇ ಚರ್ಚೆ. ಇದರ ನಡುವೆಯೇ ಬ್ಯಾಟರಿ ಚಾಲಿತ ಇ-ರಿಕ್ಷಾ ನಗರವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ರಾಜಧಾನಿ ದಿಲ್ಲಿಯ ಬಳಿಕ ಉತ್ತರ ಪ್ರದೇಶದ ಅಲಹಾಬಾದ್, ಪಂಜಾಬ್‌ನ ಲೂಯಾನಾದಲ್ಲೂ ಇವು ಕಾನೂನುಬದ್ಧ ಅನುಮತಿ ಪಡೆದು ರಸ್ತೆಗಿಳಿದಿವೆ. ಮಹಾರಾಷ್ಟ್ರದ ಮುಂಬೈ, ಪುಣೆ, ನಾಗ್ಪುರ ಹಾಗೂ ನಾಸಿಕ್‌ನಲ್ಲಿ ಇವು ಕಾರ್ಯಾಚರಿಸುತ್ತಿವೆ. ಕೇರಳದ ಬಂದರು ನಗರ ಕೊಚ್ಚಿನ್ ಇದೀಗ ಹೊಸ ಕಾರಣಕ್ಕೆ ಸುದ್ದಿಯಲ್ಲಿದೆ. ಸೌರಶಕ್ತಿಯಿಂದ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳಿಂದ ಚಾಲನೆಗೊಳ್ಳುವ ಹೊಸ ಮಾದರಿಯ ಇ-ರಿಕ್ಷಾ ಆಗಸ್ಟ್ 16ರಂದು ಕಾರ್ಯಾಚರಣೆಗೆ ಇಳಿದಿದೆ.

ಜಾರ್ಜ್ ಕುಟ್ಟಿ ಕರಿಯನಪಳ್ಳಿ ಈ ಹೊಸ ಸಂಶೋಧನೆಯ ಜನಕ. ‘‘ಸಾಂಪ್ರದಾಯಿಕ ವಾಹನಗಳಿಂದ ಮತ್ತು ಆಟೊಗಳಿಂದ ಮಿತಿಮೀರಿದ ಮಾಲಿನ್ಯ ಉಂಟಾಗುತ್ತದೆ. ಸ್ವಲ್ಪವೂ ಇಂಗಾಲವನ್ನು ಉಗುಳದ, ಪುನರ್ ಬಳಕೆ ಇಂಧನದಿಂದ ಚಾಲನೆ ಮಾಡಬಹುದಾದ ರಿಕ್ಷಾ ಅಭಿವೃದ್ಧಿಪಡಿಸಲು ಇದು ನನಗೆ ಪ್ರೇರಣೆಯಾಯಿತು. ಕೊಚ್ಚಿ ನಿವಾಸಿಯಾಗಿ ನಾನು ಮಾಲಿನ್ಯಕ್ಕೆ ಸಾಕ್ಷಿಯಾಗಿದ್ದೇನೆ. ಇದರ ಪರಿಣಾಮವಾಗಿ ಜನ ನರಳುತ್ತಿರುವುದನ್ನೂ ಕಂಡಿದ್ದೇನೆ’’ ಎಂದು ಅವರು ಹೇಳುತ್ತಾರೆ.

ಸೌರವಿದ್ಯುತ್‌ನ ಕಟ್ಟಾ ಪ್ರತಿಪಾದಕರಾಗಿರುವ ಕರಿಯನಪಳ್ಳಿ ಕಳೆದ ಹದಿನಾರು ವರ್ಷಗಳಿಂದ ಒಂದಲ್ಲ ಒಂದು ಸೌರಚಾಲಿತ ಯಂತ್ರಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸೌರ ಪೌಲ್ಟ್ರಿ ಇನ್‌ಕ್ಯುಬೇಟರ್ ಹಾಗೂ ಹಸುವಿನ ಹಾಲು ಕರೆಯುವ ಸೌರಚಾಲಿತ ಯಂತ್ರ ಇವರ ಸಂಶೋಧನೆ. ಭಾರತದಲ್ಲಿ ಹೇರಳವಾಗಿ ಸೂರ್ಯನ ಬೆಳಕು ಇರುವುದರಿಂದ ದೇಶದಲ್ಲಿ ಇದನ್ನು ವಿುಲವಾಗಿ ಬಳಸಿಕೊಳ್ಳಬೇಕು ಎನ್ನುವುದು ಅವರ ಚಿಂತನೆ. ಅವರ ಇತ್ತೀಚಿನ ಸಂಶೋಧನೆ ಸೌರ ಆಟೊರಿಕ್ಷಾ. ಇದು ಶ್ರಮಿಕ ವರ್ಗಕ್ಕೆ ಅತ್ಯಂತ ಪ್ರಯೋಜನಕಾರಿ ಹಾಗೂ ಮಾಲಿನ್ಯ ಉಂಟುಮಾಡದ ಸಾರಿಗೆ ಸಾಧನ ಎನ್ನುವುದು ಅವರ ಅಭಿಮತ. ಇವರ ಅಂತಿಮ ಗುರಿ, ಮೆಟ್ರೊ ನಿಲ್ದಾಣಗಳಿಗೆ ಫೀಡರ್ ಪ್ರಯಾಣಿಕ ವಾಹನಗಳಾಗಿ ಇಂಥ ಮಿನಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಆ ಮೂಲಕ ಸಾರ್ವಜನಿಕ ಸಾರಿಗೆ ಶ್ರಮಿಕ ವರ್ಗದ ಕೈಗೆಟುಕುವಂತೆ ಮಾಡುವುದು
‘‘ಇದು ಪರಿಸರ ಸ್ನೇಹಿ ಮಾತ್ರವಲ್ಲದೆ, ಕಡಿಮೆ ವೆಚ್ಚದಾಯಕ ಕೂಡಾ. ಕೊಚ್ಚಿಯ ಹಲವು ಮಂದಿ ಆಟೊ ರಿಕ್ಷಾ ಚಾಲಕರ ಜತೆ ನಾನು ಚರ್ಚಿಸಿದ್ದೇನೆ. ಬಹುತೇಕ ಚಾಲಕರು 12 ಗಂಟೆಗೆ 250 ರೂಪಾಯಿ ಬಾಡಿಗೆಗೆ ರಿಕ್ಷಾಗಳನ್ನು ಮಾಲಕರಿಂದ ಪಡೆಯುತ್ತಾರೆ. ಬಳಿಕ ನಗರದಲ್ಲಿ ದಿನಕ್ಕೆ ಸರಾಸರಿ 80 ರಿಂದ 100 ಕಿಲೋಮೀಟರ್ ತಿರುಗಾಡಲು ಕನಿಷ್ಠ 250 ರೂಪಾಯಿಯ ಡೀಸೆಲ್ ಬೇಕು. ಆದ್ದರಿಂದ ಪ್ರತಿ ಕಿಲೋಮೀಟರ್‌ಗೆ 10 ರೂಪಾಯಿ ವೆಚ್ಚ ತಗುಲಿದಂತಾಗುತ್ತದೆ. 500 ರೂಪಾಯಿ ವೆಚ್ಚ ಮಾಡಿ ದಿನದ ಕೊನೆಗೆ ಶ್ರಮಪಟ್ಟು ಕುಟುಂಬಕ್ಕಾಗಿ 500 ರೂಪಾಯಿ ಉಳಿಸಲು ಸಾಧ್ಯವಾಗುತ್ತದೆ’’ ಎನ್ನುವುದು ಅವರ ಲೆಕ್ಕಾಚಾರ.
‘‘ಸೌರ ರಿಕ್ಷಾದ ಬೆಲೆ 1.25 ಲಕ್ಷ ರೂಪಾಯಿ. ಆದರೆ ಇದಕ್ಕೆ ಬಾಡಿಗೆ ಹಾಗೂ ಇಂಧನ ವೆಚ್ಚ ಇಲ್ಲದ ಕಾರಣ, 500 ರೂಪಾಯಿಗಳನ್ನು ಉಳಿಸಬಹುದು. 250 ವ್ಯಾಟ್‌ನ ಸೌರಪ್ಯಾನೆಲ್ ಹೊಂದಿರುವ ರಿಕ್ಷಾವನ್ನು ನಿಂತ ಅವಯಲ್ಲಿ ಚಾರ್ಜ್ ಮಾಡಬಹುದು. ಅವು ಚಾಲನೆಯಲ್ಲಿರುವಾಗ ಬ್ಯಾಟರಿಯನ್ನು ಬಳಸಿಕೊಳ್ಳುತ್ತವೆ. ಇದನ್ನು ಖರೀದಿಸಲು ಸ್ಥಳೀಯ ಗ್ರಾಮೀಣ ಬ್ಯಾಂಕುಗಳು ಅಥವಾ ಇತರ ಯಾವುದೇ ಬ್ಯಾಂಕುಗಳು ಶೇ. 5ರ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಇಂಗಾಲ ಉಗುಳದೆ ಇರುವ ಕಾರಣಕ್ಕಾಗಿ ಸರಕಾರ ಕೂಡಾ ಇವರಿಗೆ ಶೇ. 50ರಷ್ಟು ಸಬ್ಸಿಡಿ ನೀಡಬಹುದು. ನನ್ನ ಲೆಕ್ಕಾಚಾರದ ಪ್ರಕಾರ, ಸೌರ ರಿಕ್ಷಾ ಚಾಲಕ ದಿನಕ್ಕೆ ಕನಿಷ್ಠ ಒಂದು ಸಾವಿರ ರೂಪಾಯಿ ದುಡಿಯಬಹುದು. ಆತನಿಗೆ ಬರುವ ಏಕೈಕ ವೆಚ್ಚ ಎಂದರೆ ವಾಹನವನ್ನು ನಿರ್ವಹಿಸುವುದು’’ ಎಂದು ಇ-ರಿಕ್ಷಾ ಅರ್ಥಶಾಸವನ್ನು ವಿವರಿಸುತ್ತಾರೆ.

ಸೌರ ರಿಕ್ಷಾದ ಮುಖ್ಯ ಕವಚವನ್ನು ವಾಹನ ವಿನ್ಯಾಸ ಹಾಗೂ ಉತ್ಪಾದನಾ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡು ಸಿದ್ಧಪಡಿಸಲಾಗುತ್ತದೆ. ಬಳಿಕ ಅದನ್ನು ಕೊಚ್ಚಿಯಲ್ಲಿ ಸೌರ ರಿಕ್ಷಾ ಆಗಿ ಪರಿವರ್ತಿಸಲಾಗುತ್ತದೆ. ಈ ಸೇವೆ 16 ಸೌರ ರಿಕ್ಷಾಗಳೊಂದಿಗೆ ಆರಂಭವಾಗಿದೆ. ತ್ರಿಶ್ಶೂರಿನ ಎಲೈಟ್ ುಡ್ಸ್ ಎಂಬ ಬೇಕರಿ ಇಂಥ 100 ಸೌರ ರಿಕ್ಷಾಗಳಿಗೆ ಈಗಾಗಲೇ ಬೇಡಿಕೆ ಸಲ್ಲಿಸಿದೆ. ಕ್ರಮೇಣ ಇಂಥ ಇ- ರಿಕ್ಷಾಗಳನ್ನು ಎಲ್ಲ ದಕ್ಷಿಣ ರಾಜ್ಯಗಳಲ್ಲಿ ವಿಸ್ತರಿಸುವುದು ಅವರ ಗುರಿ. ಏಕೆಂದರೆ ಉತ್ತರ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳಲ್ಲಿ ಇ- ರಿಕ್ಷಾಗಳು ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ. ‘‘ಹೊಸ ವಾಹನದ ಬಗ್ಗೆ ಸಾಕಷ್ಟು ಆಸಕ್ತಿ ಹುಟ್ಟಿಕೊಂಡಿದೆ. ಆದರೆ ಈ ವಾಹನವನ್ನು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ನಿರ್ಮಿಸಬೇಕಾಗುತ್ತದೆ. ಉದಾಹರಣೆಗೆ ಒಬ್ಬ ತರಕಾರಿ ಮಾರುವವನಿಗೆ ಬೇಕಾಗುವ ರಿಕ್ಷಾ ಹಾಗೂ ಬೇಕರಿಯವನಿಗೆ ಬೇಕಾಗುವ ರಿಕ್ಷಾ ಬೇರೆ ಬೇರೆ ಬಗೆಯದ್ದು. ಆದ್ದರಿಂದ ಅವರ ಬಳಕೆಗೆ ಬೇಕಾದಂತೆ ವಿನ್ಯಾಸಗೊಳಿಸಬೇಕಾಗುತ್ತದೆ’’ ಎನ್ನುವುದು ಅವರ ವಿವರಣೆ. ಇಂಥ ರಿಕ್ಷಾ ಉತ್ಪಾದಿಸಲು ಬೇರೆಯವರಿಗೆ ್ರಾಂಚೈಸಿ ನೀಡುವ ಬಗ್ಗೆ ಅಥವಾ ಬೆಂಗಳೂರಿನಲ್ಲಿ ಉತ್ಪಾದನಾ ಹಬ್ ನಿರ್ಮಿಸುವ ಬಗ್ಗೆಯೂ ಅವರು ಚಿಂತನೆ ನಡೆಸಿದ್ದಾರೆ. ‘‘ಇದಕ್ಕೆ ಬೆಂಗಳೂರು ಅತ್ಯಂತ ಸೂಕ್ತ ಜಾಗ. ಏಕೆಂದರೆ ಇದು ದಕ್ಷಿಣ ಭಾರತದ ಕೇಂದ್ರಭಾಗದಲ್ಲಿದೆ’’ ಎಂದು ಜಾರ್ಜ್ ವಿವರಿಸುತ್ತಾರೆ.

‘‘ಭವಿಷ್ಯದ ವರ್ಷಗಳಲ್ಲಿ ಸೌರ ರಿಕ್ಷಾಗಳು ಹೆಚ್ಚು ಜನಪ್ರಿಯವಾಗುವ ಎಲ್ಲ ಸಾಧ್ಯತೆಗಳೂ ಇವೆ. ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅನಿವಾರ್ಯ. ಇಂದು ದೇಶದ ಶೇ. 10ರಷ್ಟು ಮಂದಿ ಮಾತ್ರ ಸ್ವಂತ ವಾಹನ ಹೊಂದಿದ್ದು, ನಗರಗಳು ಈಗಾಗಲೇ ಇವುಗಳ ದಟ್ಟಹೊಗೆಯಿಂದ ಕಂಗೆಟ್ಟಿವೆ. ಬ್ಯಾಟರಿ ಚಾಲಿತ ವಾಹನಗಳಿಗೆ ಉಚಿತ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸರಕಾರ ಮುಂದಾಗಿರುವ ಹಿನ್ನೆಲೆಯಲ್ಲಿ, ಇ- ರಿಕ್ಷಾಗಳಿಗೆ ಉಜ್ವಲ ಭವಿಷ್ಯ ಇದೆ. ಅದರಲ್ಲೂ ಸೂರ್ಯನ ಶಾಖದಿಂದ ಶಕ್ತಿ ಪಡೆಯುವ ಸೌರವಿದ್ಯುತ್ ಸ್ಥಾವರಗಳನ್ನು ಎಲ್ಲ ಆಟೊ ನಿಲ್ದಾಣಗಳಲ್ಲೂ ಅಭಿವೃದ್ಧಿಪಡಿಸುವುದು ಅಗತ್ಯ’’ ಎಂದು ಕರಿಯನಪಳ್ಳಿ ಹೇಳುತ್ತಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪುನರ್ಬಳಕೆ ಇಂಧನಕ್ಕೆ ಬದಲಾಗಬೇಕಿದ್ದರೆ ಇದು ಅನಿವಾರ್ಯ. ನಮ್ಮ ನೀತಿ ನಿರೂಪಕರು, ಇಂಥ ಪ್ರಯತ್ನಗಳಿಗೆ ಉತ್ತೇಜನ ನೀಡಬೇಕು. ಒಂದು ದೃಢವಾದ ನೀತಿ ಹಾಗೂ ಮಾರ್ಗಸೂಚಿ ಖಂಡಿತವಾಗಿಯೂ ಭಾರತವನ್ನು ಈ ಕ್ಷೇತ್ರದ ಮಾದರಿ ರಾಷ್ಟ್ರವಾಗಿ, ಉಳಿದೆಲ್ಲ ದೇಶಗಳು ಅನುಕರಿಸುವಂತೆ ಮಾಡಬಹುದು.

share
ಸಪ್ನಾ ಗೋಪಾಲ್
ಸಪ್ನಾ ಗೋಪಾಲ್
Next Story
X