ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಿ
ಮಾನ್ಯರೆ,
ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಾವರ ಗ್ರಾಮದಲ್ಲಿ ಮೂಲಭೂತ ಸಾರಿಗೆ ವ್ಯವಸ್ಥೆಯಿಲ್ಲದೆ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ನೇರವಾಗಿ ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಬಹುಪಾಲು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ನಡೆದುಕೊಂಡು ಹೋಗಬೇಕಾಗಿದ್ದು, ತಡವಾಗಿ ಹೋಗುವ ಪರಿಸ್ಥಿತಿಯಿಂದಾಗಿ ಗೈರು ಹಾಜರಾಗುತ್ತಾರೆ. ಹೀಗಾಗಿ ಇನ್ನೂ ಅನೇಕರು ಅರ್ಧದಲ್ಲಿಯೇ ಶಾಲೆಗಳನ್ನು ಬಿಡುತ್ತಿದ್ದಾರೆ. ನಮ್ಮೂರಿಗೆ ಬರುವುದು ಒಂದು ಕೆಎಸ್ಸಾರ್ಟಿಸಿ ಬಸ್. ಅದು ಬರುವುದು ಎಲ್ಲಾ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋದ ಮೇಲೆ.ಹೀಗಾಗಿ ಬಸ್ಸಿದ್ದೂ ಪ್ರಯೋಜನವಿಲ್ಲದಂತಾಗಿದೆ. ಜೊತೆಗೆ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ರೈತರು ಪರದಾಡುವಂತಾಗಿದೆ. ತಕ್ಷಣವೇ ಸಂಬಂಧಪಟ್ಟ ಅಕಾರಿಗಳು, ವಿಭಾಗದ ಸಚಿವರು, ಗಮನಹರಿಸಿ ಸಾರಿಗೆ ವ್ಯವಸ್ಥೆ ಸಮಸ್ಯೆಗೆ ಅಂತ್ಯ ಹಾಡಲಿ
-ರಮ್ಯಾ ಎಸ್. ಹೊನ್ನಾವರ,
ದೊಡ್ಡಬಳ್ಳಾಪುರ
Next Story





