ಕೆ.ಎಲ್.ರಾಹುಲ್ ಪ್ರಬುದ್ಧ ಬ್ಯಾಟ್ಸ್‌ಮನ್: ರವಿ ಶಾಸ್ತ್ರಿ

ಹೊಸದಿಲ್ಲಿ, ಸೆ.1: ಇತ್ತೀಚೆಗೆ ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಶತಕ ಸಿಡಿಸಿರುವ ಕನ್ನಡಿಗ ಕೆ.ಎಲ್. ರಾಹುಲ್ ವಿಶ್ವ ಕ್ರಿಕೆಟ್‌ನ ಪ್ರಬುದ್ಧ ಬ್ಯಾಟ್ಸ್‌ಮನ್ ಎಂದು ಭಾರತದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಶ್ಲಾಘಿಸಿದ್ದಾರೆ.
‘‘ಕಳೆದ ಒಂದು ವರ್ಷದಿಂದ ರಾಹುಲ್ ವಿಶ್ವದ ಅತ್ಯಂತ ಪ್ರಬುದ್ಧ ಆಟಗಾರನಾಗಿ ಮೂಡಿಬಂದಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದು, ಅವರಿಗೆ ಉಜ್ವಲ ಭವಿಷ್ಯವಿದೆ’’ ಎಂದು ಶಾಸ್ತ್ರಿ ಹೇಳಿದ್ದಾರೆ.
‘‘ರಾಹುಲ್ ವಿಕೆಟ್‌ಕೀಪಿಂಗ್ ಕೌಶಲ್ಯ ಇತರ ಆಟಗಾರರಿಗಿಂತ ಭಿನ್ನವಾಗಿ ಗುರುತಿಸಲು ಸಾಧ್ಯವಾಗಿಸಿದೆ. ಅವರು ಮುಂಬರುವ ದಿನಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುವುದು ಖಚಿತ’’ ಎಂದು ಈವರ್ಷದ ಟ್ವೆಂಟಿ-20 ವಿಶ್ವಕಪ್‌ನ ತನಕ ಭಾರತದ ಮಾರ್ಗದರ್ಶಕರಾಗಿದ್ದ ಶಾಸ್ತ್ರಿ ನುಡಿದರು.
Next Story





