ಪಿಎಸ್ಸೈ ರೇವತಿ ವಜಾಕ್ಕೆ ಖಂಡನೆ
ಮಂಗಳೂರು, ಸೆ. 1: ಭಟ್ಕಳದ ಪಿಎಸ್ಸೈ ರೇವತಿಯವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವಜಾಗೊಳಿಸಿರುವುದನ್ನು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಖಂಡಿಸಿದೆ.
ರೇವತಿ ದಕ್ಷ ಅಧಿಕಾರಿಯಾಗಿದ್ದು, ಅವರ ರಾಜೀನಾಮೆಯನ್ನು ಹಿಂಪಡೆದು ಕೂಡಲೇ ಸೇವೆಗೆ ನಿಯುಕ್ತಿಗೊಳಿಸಬೇಕೆಂದು ಸಂಘವು ಐಜಿಪಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ. ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ, ರಘುವೀರ್ ಸೂಟರ್‌ಪೇಟೆ, ಧನುಷ್ ಶೆಟ್ಟಿ, ಶೈಲೇಶ್ ಕೋಟ್ಯಾನ್, ರಿತೇಶ್ ದೇವಾಡಿಗ, ತುಷಾರ್, ಅಂಕಿತ್, ಅನಿಷಾ ರಾವ್, ನಿಷಾ ಮ್ಯಾಥ್ಯು, ಅಂಕಿತಾ ನಿಯೋಗದಲ್ಲಿದ್ದರು.
Next Story





