ದುರಸ್ತಿಯಾಗದ ಪೈಪ್‌ಲೈನ್: ಎರಡನೆ ದಿನವೂ ಮಂಗಳೂರಿಗಿಲ್ಲ ನೀರು
ಮಂಗಳೂರು, ಸೆ.1: ಅಡ್ಯಾರ್‌ನಲ್ಲಿ ಒಡೆದು ಹೋಗಿರುವ ತುಂಬೆ ಡ್ಯಾಂನಿಂದ ನಗರಕ್ಕೆ ನೀರು ಸರಬರಾಜಾಗುವ ಪ್ರಮುಖ ಪೈಪ್‌ಲೈನ್ ದುರಸ್ತಿ ಕಾರ್ಯ ಇನ್ನೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ಶೇ.60 ಭಾಗ ಮಂಗಳೂರಿಗೆ ಗುರುವಾರವೂ ನೀರು ಪೂರೈಕೆಯಾಗಿಲ್ಲ.
ಪೈಪ್‌ಲೈನ್ ಮಂಗಳವಾರ ಒಡೆದುಹೋಗಿದ್ದು, ನಿನ್ನೆ ಬೆಳಗ್ಗಿನಿಂದಲೇ ಇದರ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಗುರುವಾರ ಬೆಳಗ್ಗೆ ಇದು ದುರಸ್ತಿಯಾಗಿತ್ತು. ಸಂಜೆ 4 ಗಂಟೆ ವೇಳೆ ನೀರು ಸರಬರಾಜು ಆರಂಭಿಸಲಾಗಿತ್ತು. ಆದರೆ, ಅದೇ ಪೈಪ್‌ಲೈನ್‌ನ ಇನ್ನೊಂದು ಕಡೆಯಲ್ಲಿ ನೀರು ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದೇವೆ. ಇದರ ದುರಸ್ತಿ ಕಾರ್ಯ ಮುಂದುವರಿದಿದ್ದು, ಶುಕ್ರವಾರ ಬೆಳಗ್ಗೆ ನಗರಕ್ಕೆ ನೀರು ಪೂರೈಕೆ ಆಗಲಿದೆ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದ್ದಾರೆ.
Next Story





