ವಿಕಾಸ್ ಕಾಲೇಜು ವಿದ್ಯಾರ್ಥಿನಿಯರು ಕಬಡ್ಡಿಯಲ್ಲಿ ಪ್ರಥಮ
ಮಂಗಳೂರು, ಸೆ.1: ನಗರದ ವಿಕಾಸ್ ಕಾಲೇಜಿನ ವಿದ್ಯಾರ್ಥಿಗಳು ಗೋಕರ್ಣನಾಥ ಕಾಲೇಜಿನಲ್ಲಿ ನಡೆದ ಪಿಯು ವಿಭಾಗದ ತಾಲೂಕು ಮಟ್ಟದ ಅಂತರ್ ಕಾಲೇಜು ಮಹಿಳಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿಕಾಸ್ ಎಜ್ಯೂಸೊಲ್ಯುಷನ್ ನಿರ್ದೇಶಕ ಡಾ.ಅನಂತ್‌ಪ್ರಭುಜಿ, ಉಪಪ್ರಾಂಶುಪಾಲೆ ಮೋಹನಾ, ದೈಹಿಕ ಶಿಕ್ಷಕ ರಮೇಶ್ ಪೂಜಾರಿ, ತರಬೇತುದಾರೆ ಸುಮಿತಾ, ಉಪನ್ಯಾಸಕರಾದ ಐಶ್ವರ್ಯ, ಪ್ರದೀಪ್ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ತಂಡದ ಸದಸ್ಯರು: ದ್ವಿತೀಯ ವಾಣಿಜ್ಯ ವಿಭಾಗದ ಪ್ರತೀಕ್ಷಾ, ಕವನಾ, ನಿಶ್ಮಿತಾ, ಪ್ರಥಮ ವಾಣಿಜ್ಯ ವಿಭಾಗದ ಯಶೋದಾ, ಹರ್ಷಿಣಿ, ಶ್ರೀನಿಧಿ, ಪ್ರಣವಿ, ವಂದಿತಾ, ಧೃತಿ, ಪೂರ್ಣಿಮಾ, ಜಸ್ಟಿನಾ ಥೋಮಸ್.
Next Story





