ಝೀನತ್ ಬಕ್ಷ್: 90ನೆ ಆಂಡ್ ನೇರ್ಚೆ
![ಝೀನತ್ ಬಕ್ಷ್: 90ನೆ ಆಂಡ್ ನೇರ್ಚೆ ಝೀನತ್ ಬಕ್ಷ್: 90ನೆ ಆಂಡ್ ನೇರ್ಚೆ](https://www.varthabharati.in/sites/default/files/images/articles/2016/09/2/rasheed haji.jpg)
ಮಂಗಳೂರು, ಸೆ.1: ಮುಹಮ್ಮದ್ ವೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ ಅವರ 90ನೆ ಆಂಡ್ ನೇರ್ಚೆಯು ಇತ್ತೀಚೆಗೆ ನಗರದ ಕೇಂದ್ರ ಜುಮಾ ಮಸೀದಿ ಝೀನತ್ ಬಕ್ಷ್ನಲ್ಲಿ ಜರಗಿತು. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಕೂಟು ಝಿಯಾರತ್ ನೆರವೇರಿತು.
ಈ ಸಂದರ್ಭ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ವೈ.ಅಬ್ದುಲ್ಲಾ ಕುಂಞಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ, ಟ್ರಸ್ಟಿ ಹಾಜಿ ಅಹ್ಮದ್ ಬಾಷಾ ತಂಙಳ್, ಮಸೀದಿಯ ಖತೀಬ್ ವಿ.ಕೆ.ಸದಕತುಲ್ಲಾ ಫೈಝಿ, ಕಂಕನಾಡಿ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮುಸ್ಲಿಯಾರ್, ಅಝರಿಯಾ ಮದ್ರಸದ ಮುದರ್ರಿಸ್ ಹೈದರ್ ಮದನಿ, ಕುದ್ರೋಳಿ ನಡುಪಳ್ಳಿ ಜುಮಾ ಮಸೀದಿಯ ಖತೀಬ್ ಇರ್ಷಾದ್ ಫೈಝಿ, ಕುದ್ರೋಳಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಬಾಖವಿ ಉಪಸ್ಥಿತರಿದ್ದರು.
Next Story