ಕೇರಳ: ಮುಷ್ಕರದ ವೇಳೆ ಸಣ್ಣಪುಟ್ಟ ಘರ್ಷಣೆ

ತಿರುವನಂತಪುರಂ,ಸೆ.2: ಇಪ್ಪತ್ತ ನಾಲ್ಕು ಗಂಟೆಗಳ ಕಾರ್ಮಿಕ ಮುಷ್ಕರದ ವೇಳೆ ಕೇರಳದ ವಿವಿಧ ಕಡೆಗಳಲ್ಲಿ ಸಣ್ಣಪುಟ್ಟ ಘರ್ಷಣೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ತಿರುವನಂತಪುರಂ, ಕೊಚ್ಚಿಯಲ್ಲಿ ಮುಷ್ಕರಕಾರರು ವಾಹನಗಳನ್ನು ತಡೆದಿದ್ದಾರೆ. ತತ್ಪರಿಣಾಮವಾಗಿ ಅಲ್ಲಿ ಕೆಲಕಾಲ ಘರ್ಷಣೆಯ ಸ್ಥಿತಿ ನಿರ್ಮಾಣವಾಗಿತ್ತು.
ತಿರುವನಂತಪುರದಲ್ಲಿ ಐಎಸ್‌ಆರ್‌ಒ ಮತ್ತು ವಿ.ಎಸ್. ಎಸ್.ಸಿ.ಯ ಚಟುವಟಿಕೆಗಳಿಗೆ ಮುಷ್ಕರದಿಂದಾಗಿ ಅಡ್ಡಿಯಾಗಿದೆ. ಈ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಕರೆದೊಯ್ಯುವ ವಾಹನಗಳನ್ನು ನಿಲ್ಲಿಸಲಾಗಿದ್ದ ಗ್ಯಾರೇಜ್‌ಗಳಿಗೆ ಮುಷ್ಕರ ನಿರತರು ಮುತ್ತಿಗೆ ಹಾಕಿದ್ದು ಅವುಗಳ ಚಟುವಟಿಕೆಗೆಳಿಗೆ ಬಾಧಕವಾಗಿ ಪರಿಣಮಿಸಿದೆ. ನಗರದಲ್ಲಿ ಆಟೊಗಳನ್ನು ಕೂಡಾ ಮಷ್ಕರ ನಿರತರು ತಡೆದಿದ್ದಾರೆ.
ಎರ್ನಾಕುಲಂ ಸೌತ್, ನಾರ್ತ್‌ಗಳಲ್ಲಿ ರೈಲು ಪ್ರಯಾಣಿಕರ ವಾಹನಗಳನ್ನು ಮುಷ್ಕರ ನಿರತರು ತಡೆದರು. ಉಬರ್ ಕ್ಯಾಬ್ ಟ್ಯಾಕ್ಸಿಯ ಗಾಜನ್ನು ಪುಡಿಗುಟ್ಟಿದ್ದಾರೆ. ಕೊಚ್ಚಿಯಲ್ಲಿ ವಾಣಿಜ್ಯ ಸಂಸ್ಥೆಗಳಿಗೆ ಕೆಲವಷ್ಟೆ ಉದ್ಯೋಗಿಗಳು ಬಂದಿದ್ದಾರೆ. ಕೊಚ್ಚಿಯ ಶಿಪ್‌ಯಾರ್ಡ್ ಟ್ರಸ್ಟ್, ಎಫ್‌ಐಸಿಟಿ.ಕಾಕ್ಕನಾಡ್ ಇನ್ಫೋ ಪಾರ್ಕ್ ಉದ್ಯೋಗಿಗಳ ಹಾಜರಾತಿ ವಿರಳವಾಗಿದೆ. ಎಫ್‌ಎಸಿಟಿಗೆ ಕೆಲಸಕ್ಕೆ ಬಂದವರು ಕಾರ್ಮಿಕ ಸಂಘಟನೆ ನಾಯಕರು ಮರಳಿ ಕಳುಹಿಸಿದ್ದಾರೆ.
ಕಳೆದ ರಾತ್ರಿ ಹತ್ತು ಗಂಟೆಗೆ ತಿರುವನಂತಪುರಂ ಸರಕಾರಿ ಪ್ರೆಸ್‌ಗೆ ಮುತ್ತಿಗೆ ಹಾಕಿ ಜಂಟಿ ಮುಷ್ಕರ ಸಮಿತಿ 24 ಗಂಟೆಗಳ ಮುಷ್ಕರವನ್ನು ಆರಂಭಿಸಿತು ಎಂದು ವರದಿ ತಿಳಿಸಿದೆ.







