ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಶರೀರಕ್ಕೆ ಚುಚ್ಚಿದ ಮುಳ್ಳು: ವಾಯು ಸೇನಾ ಮುಖ್ಯಸ್ಥ

ಹೊಸದಿಲ್ಲಿ, ಸೆ.2: ನೈತಿಕತೆಯನ್ನು ಎತ್ತಿಹಿಡಿಯುವುದಕ್ಕಿಂತ ಸೇನಾ ಪರಿಹಾರಕ್ಕೆ ಭಾರತ ಪ್ರಯತ್ನಿಸಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರ ಭಾರತ ಭಾಗವೇ ಅಗಿಬಿಡುತ್ತಿತ್ತು ಎಂದು ವಾಯು ಸೇನೆಯ ಮುಖ್ಯಸ್ಥ ಅರೂಪ್ ರಾಹ ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಅವರು "ಭಾರತದ ಶರೀರಕ್ಕೆ ಚುಚ್ಚಿದ ಮುಳ್ಳು" ಎಂದು ವಿಶ್ಲೇಷಿಸಿದ್ದಾರೆ. ಸುರಕ್ಷೆಯ ಪ್ರಕ್ರಿಯೆಗಳಲ್ಲಿ ಪ್ರಾಯೋಗಿಕತೆ ಅಗತ್ಯ ಎಂದು ಅವರು ಹೊಸದಿಲ್ಲಿಯಲ್ಲಿ ನಡೆದ ಸೆಮಿನಾರ್‌ವೊಂದರಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.
ಸುರಕ್ಷಾ ಕಾರ್ಯಗಳಲ್ಲಿ ಬರೇ ಪ್ರಾಯೋಗಿಕ ನಿಲುಮೆ ಮಾತ್ರ ಸಾಲದು. ದೇಶವನ್ನು ಬಾಧಿಸುವ ಸಮಸ್ಯೆಗಳುಂಟಾಗುವಾಗ ಅದನ್ನು ಎದುರಿಸಲು ಮತ್ತು ಬಗೆಹರಿಸಲು ಭಾರತದ ಸಂಪೂರ್ಣ ಸೈನಿಕ ಶಕ್ತಿಯನ್ನು ಬಳಸುವುದರಲ್ಲಿ ಅದರಲ್ಲಿಯೂ ವಾಯುಸೇನೆಯ ಶಕ್ತಿಯನ್ನು ಬಳಸುವುದರಲ್ಲಿ ಭಾರತ ಹಿಂಜರಿಕೆ ತೋರಿಸಿತು ಎಂದು ಏರ್‌ಚೀಫ್‌ಮಾರ್ಶಲ್ ಅರೂಪ್ ರಾಹ ಹೇಳಿದ್ದಾರೆ. ಆದರೆ 1971ರ ಯುದ್ಧದಲ್ಲಿ ಸೇನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಇಂದು ಪರಿಸ್ಥಿತಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಾಯುಶಕ್ತಿ ಸ್ವಯಂ ಪ್ರತಿರೋಧ ಮತ್ತು ಇತರರನ್ನು ಆಕ್ರಮಿಸುವುದರಿಂದ ಹಿಂದೆ ಸರಿಯುವಂತೆ ಮಾಡಲು ಸಮರ್ಥವಾಗಿದೆ ಎಂದು ರಾಹ ಹೇಳಿದ್ದಾರೆ. 1947ರಲ್ಲಿ ಜಮ್ಮು ಕಾಶ್ಮೀರದಲ್ಲಿ ಅಕ್ರಮಿಗಳ ಒಂದು ಗುಂಪು ನುಸುಳಿ ಬಂದು ಆಕ್ರಮಣ ನಡೆಸಿದಾಗ ವಾಯು ಸೇನೆ ಸಾರಿಗೆ ವಿಮಾನಗಳಲ್ಲಿ ವಾಯು ಸೇನೆ ಸೈನಿಕರನ್ನು ಕಳುಹಿಸಿ ಅಲ್ಲಿ ವಿನ್ಯಾಸಗೊಳಿಸಿತ್ತು ಎಂಬುದನ್ನು ಅವರು ನೆನಪಿಸಿದ್ದಾರೆ. ಒಂದು ಸೈನಿಕ ಪರಿಹಾರಕಂಡುಕೊಳ್ಳುವ ಅವಕಾಶ ತನ್ನಮುಂದಿದ್ದು ಕೂಡಾ ಭಾರತ ನೈತಿಕ ಕಾರ್ಯಗಳನ್ನೆತ್ತಿ ಹಿಡಿಯಿತು. ನಾವು ಶಾಂತಿಯಿಂದ ಸಮಸ್ಯೆ ಪರಿಹಾರಕ್ಕಾಗಿ ವಿಶ್ವಸಂಸ್ಥೆಯ ನೆರವು ಕೇಳಿದೆವು. ಅದ್ದರಿಂದ ಸಮಸ್ಯೆ ಇಂದುಕೂಡಾ ಮುಂದುವರಿಯುತ್ತಿದೆ ಎಂದು ಅವರು ಹೇಳಿದ್ದಾರೆಂದು ವರದಿ ತಿಳಿಸಿದೆ.







