ನಿಮ್ಮ ಫೇವರಿಟ್ ಸಬ್ ವೇ ಸ್ಯಾಂಡ್ ವಿಚ್ ಮೆಲ್ಲುವ ಮುನ್ನ ಇಲ್ಲಿದೆ ಒಂದು ರಿಯಾಲಿಟಿ ಚೆಕ್!
ಉದ್ಯೋಗಿಯೇ ಬಹಿರಂಗಪಡಿಸಿದ ರಹಸ್ಯ

ಮಧ್ಯಾಹ್ನದೂಟಕ್ಕೆ ನಿಮ್ಮ ಫೇವರಿಟ್ ಸಬ್ ವೇ ಚಿಕನ್ ಸ್ಯಾಂಡ್ ವಿಚ್ ಮೆಲ್ಲುವ ಕನಸು ಕಾಣುತ್ತಿದ್ದೀರಾ? ಎರಡು ನಿಮಿಷ ತಾಳಿ; ಇಲ್ಲೊಂದಿಷ್ಟು ಕೇಳಿ. ಏಕೆ ತಿನ್ನಬಾರದು ಹೇಳುತ್ತೇವೆ. ಎಚ್ಚರಿಕೆ: ನಿಮಗೆ ನಿರಾಸೆಯಾದರೂ ತೊಂದರೆಯಿಲ್ಲ; ನಮ್ಮ ಮಾತು ನಂಬಿ, ಮುಂದಿನ ಬಾರಿ ತಿನ್ನುವ ಮುನ್ನ ಈ ಬಗ್ಗೆ ಒಂದಷ್ಟು ತಿಳಿದುಕೊಳ್ಳಿ. ಇಂಗ್ಲೆಂಡ್ ಸಬ್‌ವೇ ಚಿಕನ್ ಸ್ಯಾಂಡ್‌ವಿಚ್ ತಯಾರಿಸುವ ಉದ್ಯೋಗಿಯೇ ಬಹಿರಂಗಪಡಿಸಿದ ಸತ್ಯವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.
ಚಿಕನ್ ಪ್ಯಾಟಿರ್ ಬಗ್ಗೆ ಹೇಳಬೇಕೇ? ಅವು ಚಿಕನ್ ಪ್ಯಾಟಿರ್ನಂತೆ ಕಂಡರೂ ನಿಜವಾಗಿ ಪೂರ್ಣ ಚಿಕನ್ ಅಲ್ಲ. ಇಂಗ್ಲೆಂಡ್ ಸಬ್‌ವೇ ರೆಸ್ಟೋರೆಂಟ್‌ಗಳಿಗೆ ಚಿಕನ್ ಸರಬರಾಜು ಮಾಡುವವರೇ ವಿಶ್ವಾದ್ಯಂತ ಎಲ್ಲೆಡೆಗೆ ಪೂರೈಕೆ ಮಾಡುತ್ತಾರೆ. ಇದರಲ್ಲಿ ಚಿಕನ್ ಶೇಕಡ 84ರಷ್ಟಿದ್ದರೆ, ಉಳಿದ ಅಂಶ ನೀರು ಹಾಗೂ ಗಂಜಿ ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದರು.
"ಯಾವ ತಿನಸು ಒಳ್ಳೆಯ ಗುಣಮಟ್ಟದ್ದು, ಸುರಕ್ಷಿತ ಹಾಗೂ ಅತ್ಯುತ್ತಮವಾಗಿ ಸಿದ್ಧಪಡಿಸಿದ್ದು" ಎಂದು ನೀವು ಬಾವಿಸುತ್ತೀರಿ ಮತ್ತು ಯಾವುದನ್ನು ಸೇವಿಸಬಾರದು ಎಂದು ಸಲಹೆ ಮಾಡುತ್ತೀರೆಂದು ಆ ಉದ್ಯೋಗಿಯನ್ನು ಕೇಳಿದಾಗ, "ಚಿಪೋಟಲ್ ಚಿಕನ್ ಮತ್ತು ತೆರಿಯಾಕಿ ಚಿಕನ್"ನಿಂದ ದೂರ ಇರುವುದು ಉತ್ತಮ ಎಂದು ಹೇಳಿದರು. ಎರಡು ದಿನಗಳ ಕಾಲ ಇದನ್ನು ಶೆಲ್ಫ್‌ನಲ್ಲಿ ಸಂಗ್ರಹಿಸಿ ಸುರಕ್ಷಿತವಾಗಿ ಇಡಲಾಗುತ್ತದೆ. ಬಳಿಕ ಅದು ಗಂಟು ಗಂಟಾಗುತ್ತದೆ ಎಂದು ವಿವರಿಸಿದರು.
ಮೀಟ್‌ಬಾಲ್ ಮರಿನರಾ, ಚಿಪೋಟ್ಲ್ ಚಿಕನ್, ಟಿಕ್ಕಾ ಚಿಕನ್, ಸ್ಪೈಸಿ ಇಟಾಲಿಯನ್ ಹಾಗೂ ಬಿಎಂಟಿ ಇಂಥ ಸಬ್‌ವೇ ಮಳಿಗೆಗಳಿಗೆ ಆದಾಯ ತಂದುಕೊಡುವ ತಿನಸುಗಳು ಎಂದು ಬಹಿರಂಗಪಡಿಸಿದರು. ಒಂದು ಪಾನೀಯವೂ ಸೇರಿದಂತೆ ಇವುಗಳ ದರ 4 ಡಾಲರ್‌ನಿಂದ 6.5 ಡಾಲರ್ ವರೆಗೂ ಇರುತ್ತದೆ.ರಾತ್ರಿ 7 ರಿಂದ 9ರವರೆಗೆ ಶೇಕಡ 20ರ ರಿಯಾಯ್ತಿಯೂ ಇರುತ್ತದೆ ಎಂದು ಸ್ಪಷ್ಟಪಡಿಸಿದರು.







