ಹರ್ಯಾಣ: ಗೋರಕ್ಷಣೆಯ ಕಾನೂನಿದ್ದರೂ ನಂದಿಶಾಲಾದಲ್ಲಿ ಹಸುಗಳು ಸಾಯುತ್ತಿವೆ!
.jpg)
ಫತೆಬಾದ್, ಸೆಪ್ಟಂಬರ್ 2: ಫತೆ ಬಾದ್ ನಂದಿಶಾಲದಲ್ಲಿ ಹಸುಗಳು ಸಾಯುತ್ತಿರುವ ಕ್ರಿಯೆ ಮುಂದುವರಿದಿದೆ ಎಂದು ವರದಿಯಾಗಿದೆ. ಮೊನ್ನೆ ಏಳು ಹಸುಗಳು ಮತ್ತು ನಿನ್ನೆ ಮತ್ತೆ ಮೂರು ಹಸುಗಳು ಸತ್ತಿದ್ದು ಎರಡು ದಿನಗಳಲ್ಲಿ ಒಟ್ಟು ಹತ್ತು ಹಸುಗಳು ಸತ್ತಿದ್ದು ಇದು ಸರಕಾರಕ್ಕೆ ಬಹುದೊಡ್ಡತಲೆನೋವಾಗಿ ಪರಿಣಮಿಸಿದೆ.
ನಿರ್ಗತಿಕ ಹಸುಗಳಿಗೆ ಆಶ್ರಯ ನೀಡಲಿಕ್ಕಾಗಿ ನಗರದ ಜೆಟಿರೋಡ್‌ನಲ್ಲಿ ನಂದಿಶಾಲಾ ಎಂಬ ಹಸುಸಾಕಣೆ ಕೇಂದ್ರವನ್ನು ಆರಂಭಿಸಲಾಗಿತ್ತು. ಇಲ್ಲಿ ಸುಮಾರು 450 ಜಾನುವಾರುಗಳು ಇವೆ. ಆದರೆ ಈಗ ಈ ಆಶ್ರಯ ಸ್ಥಳಗಳು ಹಸುಗಳಿಗೆ ಸಾವಿನ ಮನೆಯಾಗಿದೆ. ಪ್ರತಿದಿನಾಲೂ ಇಲ್ಲಿ ಕನಿಷ್ಠ ಒಂದು ಹಸು ಸಾಯುತ್ತಿದೆ ಎಂದು ವರದಿ ತಿಳಿಸಿದೆ.
ರಾಜ್ಯದ ಬಿಜೆಪಿ ಸರಕಾರ ಗೋವಂಶದ ರಕ್ಷಣೆಗಾಗಿ ಕಾನೂನು ಮಾಡಿದೆ ಹಾಗೂ ಗೋಸೇವಾ ಆಯೋಗವನ್ನು ರಚಿಸಿದೆ. ಹೀಗಿದ್ದೂ ಪತೇಬಾದ್‌ನಲ್ಲಿ ಹಸುಗಳು ಸಾಯುತ್ತಲೇ ಇವೆ. ಕಾನೂನು ನಿಯಮಗಳ ಮೂಲಕ ಇಷ್ಟೆಲ್ಲ ಶ್ರಮವಹಿಸಿದ್ದರೂ ಗೋವುಗಳ ರಕ್ಷಣೆ ಅಸಾಧ್ಯವಾಗಿರುವುದು ರಾಜ್ಯಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದು ವರದಿತಿಳಿಸಿದೆ.





