15 ಲಕ್ಷದ ಭರವಸೆ ನೀಡಿ ನಯಾಪೈಸೆ ನೀಡದ ಪ್ರಧಾನಿ: ರಾಹುಲ್ ವಾಗ್ದಾಳಿ

ಅಮೇಠಿ,ಸೆಪ್ಟಂಬರ್ 2: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರಕಾರ ಮತ್ತು ಪ್ರಧಾನಿಯ ವಿರುದ್ಧ ಕಟು ಟೀಕಾಪ್ರಹಾರವನ್ನು ಹರಿಸಿದ್ದಾರೆ ಎಂದು ವರದಿಯಾಗಿದೆ. ಮೂರುದಿವಸಗಳ ತನ್ನ ಸಂಸತಕ್ಷೇತ್ರವಾದ ಅಮೇಠಿಗೆ ಮೂರು ದಿವಸಗಳ ಭೇಟಿಗಾಗಿ ಬಂದಿರುವ ರಾಹುಲ್ ಜಗದೀಶ್ಪುರದಲ್ಲಿ ಸಭೆಯೊಂದಲ್ಲಿ ಮಾತಾಡುತ್ತಾ ಲೋಕಸಭಾ ಚುನಾವಣೆ ವೇಳೆ ಪ್ರತಿಕಾರದ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದರು ಆದರೆ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಿ ಪ್ರತಿಕಾರದ ರಾಜಕೀಯ ಮಾಡುತ್ತಿದ್ದಾರೆ. ಅಮೇಠಿಯ ಜನರೊಂದಿಗೆ ಅವರು ಸೇಡು ತೀರಿಸಿಕೊಳ್ಳುತ್ತಿದ್ದಾರೆಂದು ರಾಹುಲ್ ಹೇಳಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಮೋದಿ ಸುಳ್ಳುಭರವಸೆಗಳನ್ನು ನೀಡಿದ್ದಾರೆ. ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15-15 ಲಕ್ಷರೂಪಾಯಿ ಬರಲಿದೆ ಆದರೆ ಈವರೆಗೂಒಂದು ನಯಾಪೈಸೆ ಕೂಡಾ ಬಂದಿಲ್ಲ ಎಂದು ರಾಹುಲ್ ಪ್ರಧಾನಿಯನ್ನು ತರಾಟೆಗೆತ್ತಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿಮಾಡುವುದಾಗಿ ಹೇಳಿದರೂ ಒಂದೇ ಒಂದು ಸ್ಮಾರ್ಟ್ ಸಿಟಿ ಆಗಿಲ್ಲ ಯಾಕೆ? ಮೇಕ್ ಇಂಡಿಯಾ ಈಗ ಬರೇ ಕೂಗು ಆಗಿ ಉಳಿದಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಭರವಸೆಯೂ ಸುಳ್ಳಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇಷ್ಟೇ ಅಲ್ಲ ಮೋದೀಜಿಯ ಆಡಳಿತದಲ್ಲಿ ದಾಲ್‌ಗೆ 200 ರೂಪಾಯಿ ಆಗಿದೆ. ಆದರೆ ನಾವು ಜನರಿಗಾಗಿ ಆಹಾರ ಸುರಕ್ಷೆ ಮಸೂದೆಯನ್ನೇ ಜಾರಿ ಮಾಡಿದ್ದೆವು ಎಂದು ಜನರಿಗೆ ರಾಹುಲ್ ವಿವರಿಸಿದ್ದಾರೆ. ಮುಂಶಿಗಂಜ್ ಗೆಸ್ಟ್ ಹೌಸ್‌ನಲ್ಲಿ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ರಾಹುಲ್ ಆಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪ್ರತಿನಿಧಿ ಕಿಶೋರಿ ಲಾಲ್‌ಶರ್ಮ್‌ರನ್ನು ಹೊರಹಾಕಬೇಕು ಎಂದು ಬೇಡಿಕೆಯೊಂದಿಗೆ ಗೆಸ್ಟ್‌ಹೌಸ್‌ಗೆ ಮುತ್ತಿಗೆ ಹಾಕಲು ಸೇರಿದ್ದ ಜನರ ಗುಂಪೊಂದನ್ನು ಪೊಲೀಸರು ಚದುರಿಸಿದ್ದಾರೆ ಎಂದು ವರದಿ ತಿಳಿಸಿದೆ.







