ಮೀಟರ್‌ಬಡ್ಡಿ ದಂಧೆಯ ರೌಡಿ ಶೀಟರ್ ಯಶಸ್ವಿನಿ ಬಂಧನ
ಬೆಂಗಳೂರು, ಸೆ.2: ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಯಶಸ್ವಿನಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಮೀಟರ್‌ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ ಕಳೆದ ಕೆಲವು ತಿಂಗಳುಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದಳು.
ಉಷಾರಾಣಿ ಎಂಬಾಕೆ ಅ.5 ರಂದು ನೀಡಿದ ದೂರಿನ ಮೇರೆಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಯಶಸ್ವಿನಿಯನ್ನು ಶುಕ್ರವಾರ ಬಂಧಿಸಿದ್ದಾರೆ.
ಯಶಸ್ವಿನಿ ಈ ಹಿಂದೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಳು. ಆದರೆ, ಎದೆನೋವು ಎಂದು ನೆಪವೊಡ್ಡಿ ನಗರದ ಅಪೊಲೊ ಆಸ್ಪತ್ರೆಗೆ ಮೇ 13 ರಂದು ದಾಖಲಾಗಿದ್ದ ಯಶಸ್ವಿನಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಳು.
ಹಣಕಾಸು ವಿಷಯಕ್ಕೆ ಸಂಬಂಧಿಸಿ ಯಶಸ್ವಿನಿಯೊಂದಿಗೆ ಉಷಾರಾಣಿ ಹಾಗೂ ಆಕೆಯ ತಾಯಿ ಉಮಾದೇವಿ ಜಗಳವಾಡಿ ಪೊಲೀಸರಿಗೆ ದೂರು ನೀಡಿದ್ದರು.
Next Story