ಶ್ರೀ ನಾರಾಯಣ ಗುರುಗಳು ದೇವರ ಅವತಾರವಲ್ಲ: ಕೇರಳ ಹೈಕೋರ್ಟ್
ತಿರುವನಂತಪುರ,ಸೆ.2: ರಾಜ್ಯದ ಮಹಾನ್ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು ದೇವರ ಅವತಾರವಲ್ಲ ಮತ್ತು ಅವರ ವಿಗ್ರಹವನ್ನು ಸ್ಥಾಪಿಸಲಾಗಿರುವ ‘ಗುರುಮಂದಿರಂ’ ಅನ್ನು ದೇವಸ್ಥಾನವೆಂದು ಪರಿಗಣಿಸುವಂತಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ಅಭಿಪ್ರಾಯಿಸಿದೆ.
ಅಲಪ್ಪುಝಾ ಜಿಲ್ಲೆಯಲ್ಲಿ ಕೆಲವು ಜನರ ನಡುವಿನ ‘ಗುರುಮಂದಿರಂ’ ಒಳಗೊಂಡ ಆಸ್ತಿ ವಿವಾದದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿ.ಚಿದಂಬರೇಶ ಮತ್ತು ಕೆ.ಹರಿಲಾಲ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಶ್ರೀ ನಾರಾಯಣ ಗುರುಗಳು ಸ್ವತಃ ಮೂರ್ತಿಪೂಜೆಯಲ್ಲಿ ನಂಬಿಕೆ ಹೊಂದಿರಲಿಲ್ಲ ಎಂದು ಅದು ಬೆಟ್ಟು ಮಾಡಿದೆ. ಆದರೆ ನಾಗರಿಕನೋರ್ವ ಶ್ರೀ ನಾರಾಯಣ ಗುರುಗಳು ಶಾಶ್ವತ ದೇವರೆಂದು ನಂಬುವ ಹಕ್ಕು ಹೊಂದಿದ್ದಾನೆ ಎಂದು ಅದು ಹೇಳಿದೆ.
Next Story





