ಆಸ್ಟ್ರೇಲಿಯ ಬೌಲರ್‌ಗಳಿಗೆ ರಿಯಾನ್ ಹ್ಯಾರಿಸ್ ಕೋಚಿಂಗ್

ಮೆಲ್ಬೋರ್ನ್, ಸೆ.2: ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ರಿಯಾನ್ ಹ್ಯಾರಿಸ್ ದಕ್ಷಿಣ ಆಫ್ರಿಕಕ್ಕೆ ಸೀಮಿತ ಓವರ್ ಕ್ರಿಕೆಟ್ ಆಡಲು ತೆರಳಲಿರುವ ಆಸ್ಟ್ರೇಲಿಯ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕಳೆದ ವರ್ಷ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಹ್ಯಾರಿಸ್ ಆಸ್ಟ್ರೇಲಿಯದ ಪರ 27 ಟೆಸ್ಟ್, 21 ಏಕದಿನ ಹಾಗೂ 3 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.
ಸೆ.27 ರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕದ ಪ್ರವಾಸದ ವೇಳೆ ಮುಖ್ಯ ಕೋಚ್ ಡರೆನ್ ಲೆಹ್ಮನ್ ಹಾಗೂ ಸಹಾಯಕ ಕೋಚ್ ಡೇವಿಡ್ ಸಾಕೆರ್‌ರನ್ನು ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯ ತಂಡ ಐರ್ಲೆಂಡ್ ವಿರುದ್ಧ ಏಕೈಕ ಏಕದಿನ ಪಂದ್ಯ ಹಾಗೂ ದಕ್ಷಿಣ ಆಫ್ರಿಕ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
Next Story





