ಸೌರವ್ ಘೋಷಾಲ್ ಕ್ವಾರ್ಟರ್‌ಫೈನಲ್‌ಗೆ
ಚೀನಾ ಓಪನ್ ಸ್ಕ್ವಾಷ್ ಟೂರ್ನಿ

ಶಾಂೈ, ಸೆ.2: ಇಲ್ಲಿ ನಡೆಯುತ್ತಿರುವ ಪಿಎಸ್‌ಎ ಚೀನಾ ಓಪನ್‌ನಲ್ಲಿ ವಿಶ್ವದ ನಂ.8ನೆ ಆಟಗಾರ ಕೊಲಂಬಿಯಾದ ಮಿಗುಯೆಲ್ ರೊಡ್ರಿಗಝ್‌ರನ್ನು ಮಣಿಸಿದ ಭಾರತದ ಸೌರವ್ ಘೋಷಾಲ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ ಇಲ್ಲಿ ನಡೆದ 100,000 ಯುಎಸ್ ಡಾಲರ್ ಬಹುಮಾನ ಮೊತ್ತದ ಮೊದಲ ಸುತ್ತಿನ ಪಂದ್ಯದಲ್ಲಿ ಘೋಷಾಲ್ ಕೊಲಂಬಿಯಾದ ಎದುರಾಳಿ ರೊಡ್ರಿಗಝ್‌ರನ್ನು 11-9, 8-11, 8-11,11-9, 11-5 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ಶ್ರೇಯಾಂಕರಹಿತ ಘೋಷಾಲ್ ಮುಂದಿನ ಸುತ್ತಿನಲ್ಲಿ ಇಟಲಿಯ ಕರೀಮ್ ಆದಿಲ್ ಗಾವದ್‌ರನ್ನು ಎದುರಿಸಲಿದ್ದಾರೆ.
70,000 ಯುಎಸ್ ಡಾಲರ್ ಬಹುಮಾನ ಮೊತ್ತದ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಜೋಶ್ನಾ ಚಿನ್ನಪ್ಪ ಅವರು ಈಜಿಪ್ಟ್‌ನ ಕ್ವಾಲಿಫೈಯರ್ ವಿರುದ್ಧ 8-11, 11-8, 11-4, 11-7 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಜೋಶ್ನಾರ ಸಹ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಈಜಿಪ್ಟ್‌ನ ನೌರಾನಾ ಗೋಹರ್ ವಿರುದ್ಧ ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಇತ್ತೀಚೆಗೆ ವಿಶ್ವ ರ್ಯಾಂಕಿಂಗ್‌ನಲಿ ಟಾಪ್-10ಕ್ಕೆ ವಾಪಸಾಗಿರುವ ಜೋಶ್ನಾ ಅಂತಿಮ 8ರ ಪಂದ್ಯದಲ್ಲಿ ಇಂಗ್ಲೆಂಡ್‌ನ ಲೌರಾ ಮಸ್ಸಾರೊರನ್ನು ಎದುರಿಸುವರು.







