‘ರಾಜಕಾಲುವೆ ಮೇಲೆ ಮನೆ ಇದ್ದರೆ ತೆರವುಗೊಳಿಸಲಿ: ನಟ ದರ್ಶನ್

ಬೆಂಗಳೂರು, ಸೆ.2: ರಾಜಕಾಲುವೆ ಮೇಲೆ ನನ್ನ ಮನೆ ಇದ್ದರೆ ಧಾರಾಳವಾಗಿ ಕೆಡವಲಿ, ನನ್ನ ಅಭ್ಯಂತರವಿಲ್ಲ ಎಂದು ಚಿತ್ರನಟ ದರ್ಶನ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ನಟ ದರ್ಶನ್ ಎಂದಾಕ್ಷಣ ಎರಡು ಕೋಡು ಇರುವುದಿಲ್ಲ. ನಾನು ವಾಸ ಮಾಡುವ ಪ್ರದೇಶದಲ್ಲಿ ಬಹಳಷ್ಟು ಗಣ್ಯರ ಮನೆಯಿದ್ದರೂ ನನ್ನದೊಂದೇ ಮನೆಯ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಕೂಡ ಎಲ್ಲರಂತೆ ನಿರ್ಮಾಣವಾಗಿದ್ದ ಮನೆಯನ್ನು ಬೇರೊಬ್ಬರಿಂದ ಖರೀದಿ ಮಾಡಿದ್ದು, ಈ ತನಕ ಅಲ್ಲೊಂದು ರಾಜಕಾಲುವೆ ಇತ್ತು ಎಂದು ನಮಗೆ ಗೊತ್ತಿರಲಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿ ಮನೆ ಕಟ್ಟಿದ್ದರೆ ಕ್ರಮಕೈಗೊಳ್ಳಲಿ, ಅದಕ್ಕೆ ನಾನು ಅಡ್ಡ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Next Story





