ಮಹಿಳೆಯ ಸರ ಕಸಿದು ಪರಾರಿ
ಮುಲ್ಕಿ, ಸೆ.2: ಬಳ್ಕುಂಜೆ ಸಮೀಪದ ಕರ್ನಿರೆ ದೇವಸ್ಥಾನ ಬಳಿ ನಿಂತಿದ್ದ ಮಹಿಳೆ ಯೊಬ್ಬರ ಕುತ್ತಿಗೆಯಿಂದ ಹವಳದ ಸರವನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಸಿದು ಪರಾರಿಯದ ಘಟನೆ ನಡೆದಿದೆ
ಗುರುವಾರ ಅಪರಾಹ್ನ ಮೂರು ಗಂಟೆಗೆ ಕರ್ನಿರೆ ಬಳಿಯ ನಿವಾಸಿ ಶೈಲಾವತಿ ಶೆಟ್ಟಿ (75) ಎಂಬವರ ಕುತ್ತಿಗೆಯಿಂದ ಸುಮಾರು 80 ಸಾವಿರ ರೂ. ವೌಲ್ಯದ ಹವಳದ ಸರ ಕಸಿದು ಪರಾರಿಯಗಿದ್ದಾನೆ. ತಕ್ಷಣ ಮಹಿಳೆ ಬೊಬ್ಬೆ ಹಾಕಿದಾಗ ಸ್ಥಳೀಯರು ಸೇರಿ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದರೂ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





