ಕೋಳಿ ಅಂಕ-ಜುಗಾರಿ ಅಡ್ಡೆಗೆ ದಾಳಿ: 11 ಮಂದಿ ಸೆರೆ
ಉಪ್ಪಿನಂಗಡಿ, ಸೆ.2: ಇಲ್ಲಿಗೆ ಸಮೀಪದ ಪೆರಿಯಡ್ಕದ ಕೂವೆಚ್ಚಾರು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಹಾಗೂ ಹೊಸಗದ್ದೆ ಸರಕಾರಿ ಶಾಲೆಯ ಗುಡ್ಡವೊಂದ ರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 11 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಳಿ ಅಂಕದಲ್ಲಿ ನಿರತರಾಗಿದ್ದ ಹಿರೇಬಂಡಾಡಿಯ ಪ್ರದೀಪ್ ಕುಮಾರ್, ಇಳಂತಿಲ ನೂಜದ ಮೋಹನ್, ಬಜತ್ತೂರು ಅಂಗರದ ಲಿಂಗಪ್ಪಗೌಡ, ಪಟ್ಲದ ಮಾಯಿಲಪ್ಪಗೌಡ, ಗೌಂಡತ್ತಿಗೆಯ ಗೋಪಾಲ ಎಂಬವರನ್ನು ಬಂಧಿಸಿ 5 ಕೋಳಿ ಮತ್ತು ಜೂಜಾಟಕ್ಕೆ ಬಳಸಿದ 1,820 ರೂ.ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ವೇಳೆ ತಪ್ಪಿಸಿಕೊಂಡ ಸಂತೋಷ್ ಅಬರಬೈಲು, ಶ್ರೀಧರ ಮಣಿಕ್ಕಳ, ಮೋನಪ್ಪಬಿಳಿಯೂರು, ಸತೀಶ್ ನೆಡ್ಚಿಲ್ ಎಂಬವರ ಮೇಲೆ ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಕೃಷ್ಣಪ್ಪಆದರ್ಶನಗರ, ರಂಜಿತ್ ಅಡೆಕ್ಕಲ್, ಚಂದ್ರಶೇಖರ ಕುಂಟಿನಿ, ಸುನೀಲ್ ಕುಮಾರ್ ಆದರ್ಶನಗರ, ಸತೀಶ್ ಗೌಡ ಬಜತ್ತೂರು, ಸುರೇಶ್ ನೆಡ್ಚಿಲ್ ಎಂಬವರನ್ನು ಬಂಧಿಸಿ ಇಸ್ಪೀಟ್ ಎಲೆ ಸೇರಿದಂತೆ ಜೂಜಾಟಕ್ಕೆ ಬಳಸಿದ 2,600 ರೂ.ವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.





