ವೈದ್ಯರ ಮೇಲೆ ಸಿಬ್ಬಂದಿಯಿಂದ ಹಲ್ಲೆ: ದೂರು
ಮೂಡುಬಿದಿರೆ, ಸೆ.2: ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಸೂದನ್ ಎಂಬವರ ಮೇಲೆ ಸಿಬ್ಬಂದಿ ವರ್ಗ ಗುರುವಾರ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಗುರುವಾರ ಲಸಿಕಾ ದಿನವಾಗಿದ್ದು, ಹಿರಿಯ ನರ್ಸ್ ಕೆ. ವಿಜಯ, ಸಿಬ್ಬಂದಿ ಅಜಯ್ ಕೆ., ಪಾಲಡ್ಕ ಆಸ್ಪತ್ರೆಯ ಕ್ಲರ್ಕ್ ಮಥಾಯಸ್ ವೈದ್ಯರಿಗೆ ತಿಳಿಸದೆ ಔತಣ ಕೂಟಕ್ಕೆ ತೆರಳಿದ್ದರು. ಇದನ್ನು ವೈದ್ಯಾಧಿಕಾರಿ ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವೈದ್ಯಾಧಿಕಾರಿ ನೀಡಿದ ದೂರಿನಂತೆ ಸಿಬ್ಬಂದಿ ಅಜಯ್ ಕೆ. ಹಾಗೂ ಇತರರ ಮೇಲೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





