ವಾಹನಗಳ ಮಧ್ಯೆ ಢಿಕ್ಕಿ: ಇಬ್ಬರಿಗೆ ಗಾಯ
ಉಪ್ಪಿನಂಗಡಿ, ಸೆ.2: ದ್ವಿಚಕ್ರ ವಾಹನಗಳ ಮಧ್ಯೆ ಢಿಕ್ಕಿಯಾದ ಪರಿಣಾಮ ದಂಪತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕರಾಯ ಗ್ರಾಮದ ಅಂಡೆತ್ತಡ್ಕ ರಸ್ತೆ ಯಲ್ಲಿ ಶುಕ್ರವಾರ ನಡೆದಿದೆ.
ಘಟನೆಯಿಂದ ಉರುವಾಲಿನ ರಝಾಕ್ ಹಾಗೂ ಅವರ ಪತ್ನಿ ಝಹುರಾ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.
ಇವರು ಅಂಡೆತ್ತಡ್ಕ ಕಡೆಯಿಂದ ಕರಾಯ ಕಡೆಗೆ ತೆರಳುತ್ತಿದ್ದ ವೇಳೆ ಅದೇ ಮಾರ್ಗ ವಾಗಿ ಇನ್ನೊಂದು ದ್ವಿಚಕ್ರ ಢಿಕ್ಕಿ ಹೊಡೆಯಿತು. ಆರೋಪಿ ಸವಾರ ಉರುವಾಲು ಗ್ರಾಮದ ಕೋಡ್ಯಡ್ಕದ ಮುಹಮ್ಮದ್ ರಫೀಕ್ ಎಂಬಾತನ ಮೇಲೆ ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





