ಕಣ್ಣೂರು: ಪೈಪ್‌ಲೈನ್ ದುರಸ್ತಿ ಕಾರ್ಯ ಪೂರ್ಣ
ಮಂಗಳೂರು, ಸೆ.2: ಅಡ್ಯಾರ್-ಕಣ್ಣೂರು ಬಳಿ ಒಡೆದು ಹೋಗಿದ್ದ ನೀರು ಸರಬರಾ ಜಿನ ಪ್ರಮುಖ ಪೈಪ್‌ಲೈನ್‌ನ ದುರಸ್ತಿ ಕಾರ್ಯ ಇಂದು ಪೂರ್ಣಗೊಂಡಿದ್ದು, ಸಂಜೆ 4:30ರಿಂದ ನಗರಕ್ಕೆ ನೀರು ಪೂರೈಕೆ ಮಾಡಲಾಗಿದೆ ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.
ತುಂಬೆ ಪಂಪ್‌ಹೌಸ್‌ನಿಂದ ಮಂಗಳೂರು ನಗರ ಮತ್ತು ಹೊರವಲಯಕ್ಕೆ ಸರಬರಾಜಾಗುತ್ತಿದ್ದ ಪ್ರಮುಖ ಪೈಪ್‌ಲೈನ್ ಮಂಗಳವಾರ ರಾತ್ರಿ ಒಡೆದು ಹೋಗಿತ್ತು. ಬುಧವಾರ ಬೆಳಗ್ಗೆನಿಂದಲೇ ಆರಂಭಿಸಲಾಗಿದ್ದ, ದುರಸ್ತಿ ಕಾರ್ಯ ಶುಕ್ರವಾರ ಅಪರಾಹ್ನ ಪೂರ್ಣಗೊಂಡಿದೆ.
Next Story





