Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಐಎಎಸ್ ತುರ್ತು ಸುಧಾರಣೆ ಅಗತ್ಯ: ವರದಿ

ಐಎಎಸ್ ತುರ್ತು ಸುಧಾರಣೆ ಅಗತ್ಯ: ವರದಿ

ವಾರ್ತಾಭಾರತಿವಾರ್ತಾಭಾರತಿ3 Sept 2016 7:58 PM IST
share
ಐಎಎಸ್ ತುರ್ತು ಸುಧಾರಣೆ ಅಗತ್ಯ: ವರದಿ

ವಾಶಿಂಗ್ಟನ್, ಸೆ.3: ರಾಜಕೀಯ ಹಸ್ತಕ್ಷೇಪ ಹಾಗೂ ಕಾಲ ಬಾಹಿರ ಸಿಬ್ಬಂದಿ ಪ್ರಕ್ರಿಯೆಗಳಿಂದ ಹದಗೆಟ್ಟಿರುವ ಭಾರತೀಯ ಆಡಳಿತ ಸೇವೆಗೆ (ಐಎಎಸ್) ತುರ್ತು ಸುಧಾರಣೆಯ ಅಗತ್ಯವಿದೆಯೆಂದು ಅಮೆರಿಕದ ಉನ್ನತ ಚಿಂತನ ಚಿಲುಮೆಯೊಂದು ಅಭಿಪ್ರಾಯಿಸಿದೆ.

ದುರದೃಷ್ಟವಶಾತ್, ಐಎಎಸ್ ರಾಜಕೀಯ ಹಸ್ತಕ್ಷೇಪ, ಕಾಲಬಾಧಿತ ಸಿಬ್ಬಂದಿ ಪ್ರಕ್ರಿಯೆಗಳು ಹಾಗೂ ನೀತಿ ಅನುಷ್ಠಾನದಲ್ಲಿ ಮಿಶ್ರ ದಾಖಲೆಗಳಿಂದ ಹದಗೆಟ್ಟಿದೆ. ಅದಕ್ಕೆ ತುರ್ತು ಸುಧಾರಣೆಯ ಅಗತ್ಯವಿದೆಯೆಂದು ಕಾರ್ನೆಜಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಶನಲ್ ಪೀಸ್, ನಿನ್ನೆ ಬಿಡುಗಡೆ ಮಾಡಿರುವ ‘ದಿ ಇಂಡಿಯನ್ ಅಡ್ಮಿನಿಸ್ಟ್ರೇಶನ್ ಸರ್ವೀಸ್ ಮೀಟ್ಸ್ ಬಿಗ್ ಡೇಟಾ’ ಕುರಿತಾದ ವರದಿಯಲ್ಲಿ ಹೇಳಿದೆ.

ಭಾರತ ಸರಕಾರವು ನೇಮಕಾತಿ ಹಾಗೂ ಭಡ್ತಿ ಪ್ರಕ್ರಿಯೆಗಳನ್ನು ಮರು ವಿನ್ಯಾಸಿಸಬೇಕು, ಪ್ರತಿ ಅಧಿಕಾರಿಯ ಸಾಧನೆಯಾದಾರಿತ ವೌಲ್ಯಮಾಪನವನ್ನು ಸುಧಾರಿಸಬೇಕು, ಅಧಿಕಾರಿಗಳನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಿ, ಹೊಣೆಗಾರಿಕೆಗೆ ಉತ್ತೇಜನ ನೀಡುವ ರಕ್ಷಣೆಯನ್ನು ಅಳವಡಿಸಬೇಕೆಂದು ಮಿಲ್‌ನ ವೈಷ್ಣವ್ ಹಾಗೂ ಸಕ್ಷಮ್ ಖೋಸ್ಲಾ ಬರೆದಿರುವ ವರದಿ ತಿಳಿಸಿದೆ.

ರಾಜಕೀಯ ಹಸ್ತಕ್ಷೇಪದಿಂದ ಭಾರೀ ಪ್ರಮಾಣದ ಅದಕ್ಷತೆ ಸೃಷ್ಟಿಯಾಗುತ್ತದೆ. ಅತ್ಯುತ್ತಮ ಅಧಿಕಾರಿಗಳಿಗೆ ಯಾವಾಗಲು ಪ್ರಮುಖ ಹುದ್ದೆಗಳು ದೊರೆಯುವುದಿಲ್ಲ. ರಾಜಕೀಯ ನಿಷ್ಠೆಯು ಅಧಿಕಾರಿಗಳಿಗೆ ವೃತ್ತಿ ಯಶಸ್ಸಿಗೆ ಪರ್ಯಾಯ ಮಾರ್ಗ ಒದಗಿಸುತ್ತದೆಂದು ಕಾರ್ನೆಜಿ ತನ್ನ 50 ಪುಟಗಳ ವರದಿಯಲ್ಲಿ ಹೇಳಿದೆ.

ಹೆಚ್ಚು ರಾಜಕೀಯ ಮೇಲಾಟದಿಂದ ಉತ್ತಮ ಅಧಿಕಾರಶಾಹಿ ಸಾಧನೆ ಸಾಧ್ಯವಾಗುವುದಿಲ್ಲವೆಂದು ಅದು ತಿಳಿಸಿದೆ.
ಪ್ರತಿ ಅಧಿಕಾರಿಯೂ ಕಣ್ಣಿಗೆ ಕಾಣುವ ಆರೋಗ್ಯ, ಶಿಕ್ಷಣ ಹಾಗೂ ಬಡತನದ ಫಲಿತಾಂಶಗಳ ಮೇಲೆ ಪ್ರಬಲ, ನೇರ ಹಾಗೂ ಅಳೆಯಬಹುದಾದ ಪ್ರಭಾವವನ್ನು ಬೀರಲು ಸಾಧ್ಯವಿದೆ. ಆದರೆ, ಆಶ್ಚರ್ಯವೆಂದರೆ, ಪ್ರಬಲ ಸ್ಥಳೀಯ ಸಂಬಂಧವಿರುವ ಅಧಿಕಾರಿಗಳು, ಭ್ರಷ್ಟಾಚಾರಕ್ಕೆ ಒಳಗಾಗುವ ಸಂಭವವಿದ್ದರೂ, ಹಲವು ಸಲ, ಸುಧಾರಿತ ಸಾರ್ವಜನಿಕ ಸೇವೆ ಒದಗಣೆಯೊಂದಿಗೆ ಸಂಬಂಧಪಡೆದಿತ್ತಾರೆಂದು ವರದಿ ಹೇಳಿದೆ.

ನಾಗರಿಕ ಸೇವೆಗಳಿಗೆ ಸುಧಾರಣಾ ಕಾರ್ಯ ಸೂಚಿಯೊಂದಕ್ಕೆ ಕರೆ ನೀಡಿರುವ ಅಮೆರಿಕನ್ ಚಿಂತನ ಚಿಲುಮೆ, ಅಧಿಕಾರಿಗಳಿಗೆ ರಾಜಕೀಯ ಪ್ರೇರಿತ ವರ್ಗಾವಣೆ ಹಾಗೂ ನೇಮಕಾತಿಗಳ ವಿರುದ್ಧ ರಕ್ಷಣೆ ನೀಡುವ ಬಾಕಿ ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಂಜೂರು ಹಾಗೂ ಅನುಷ್ಠಾನ ಮಾಡಬೇಕೆಂದು ಅದು ಸಲಹೆ ನೀಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X