ಗೌರಿಗಣೇಶೋತ್ಸವ ಹಾಗೂ ತೆನೆಹಬ್ಬ: ಪರಸ್ಪರ ಶುಭಾಷಯ ವಿನಿಮಯ

ಮಂಗಳೂರು,ಸೆ.3 : ನಗರದ ಬಿಕರ್ನಕಟ್ಟೆ ಬಾಲಯೇಸು ಮಂದಿರದಲ್ಲಿ ಗೌರಿಗಣೇಶೋತ್ಸವ ಹಾಗೂ ತೆನೆಹಬ್ಬ ಸಮಾರಂಭಕ್ಕೆ ಪರಸ್ಪರ ಶುಭಾಷಯ ಕೋರುವ ಕಾರ್ಯಕ್ರಮ ಇಂದು ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರುಗಳಾದ ಡಾ. ಸತೀಶ್‌ರಾವ್, ಭರತ್‌ರಾಜ್ ಮತ್ತು ಸಂಘನಿಕೇತನ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಕೆ. ಪದ್ಮನಾಭ ಅವರು ಮಾತೆ ಮರಿಯಮ್ಮ ಮೂರ್ತಿಗೆ ಆಗರಬತ್ತಿ ಹಚ್ಚಿ ಬಳಿಕ ಬಿಕರ್ನಕಟ್ಟೆ ಬಾಲಯೇಸು ಮಂದಿರದ ನಿದೇರ್ಶಕ ಫಾದರ್ ಎಲಿಯಾಸ್ ಡಿಸೋಜ ಅವರಿಗೆ ಫಲಪುಷ್ಪವನ್ನು ಹಸ್ತಾಂತರಿಸಿ ಕ್ರೈಸ್ತರ ತೆನೆಹಬ್ಬಕ್ಕೆ ಶುಭಾಶಯ ಕೋರಿದರು. ಬಳಿಕ ಫಾದರ್ ಎಲಿಯಾಸ್ ಡಿಸೋಜ ಮತ್ತು ಮೈಸೂರು ಧ್ಯಾನವನದ ಪ್ರ.ಧರ್ಮಗುರು ಫಾದರ್ ಡೊಮಿನಿಕ್ ವಾಝ್ ಅವರಿಗೆ ಮಂಗಳೂರು ಸಂಘನಿಕೇತನದಲ್ಲಿ ನಡೆಯುವ ಗೌರಿಗಣೇಶೋತ್ಸವದ ಪತ್ರ ನೀಡಿ ಕ್ರೈಸ್ತಬಂಧುಗಳ ಆಗಮಿಸುವಂತೆ ಆಹ್ವಾನಿಸಿದರು. ಫಾದರ್ ಪ್ರಕಾಶ್ ಡಿಕುನ್ಹಾ ಸ್ವಾಗತಿಸಿ, ವಂದಿಸಿದರು. ಫ್ರಾಂಕ್ಲಿನ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.
Next Story





