ಅಪಹರಣ ಪ್ರಕರಣ : ಇಬ್ಬರ ಬಂಧನ
ಮಂಗಳೂರು,ಸೆ.3 : ಬಂಟ್ವಾಳ ತಾಲೂಕಿನ ವಿಟ್ಲದ ಕಸಬಾ ಗ್ರಾಮದಮಂಜಲಾಡಿ ನಿವಾಸಿ ಆನಂದ ಎಂಬವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಯಿಟ್ಟಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಮತ್ತು ಡಿಸಿಐಬಿ ಪೊಲೀಸರು ಗಣೇಶ್ ಮತ್ತು ರಾಜೀವ ಎಂಬವರನ್ನು ಬಂಧಿಸಿದ್ದಾರೆ.
ತನ್ನ ಪತಿಯನ್ನು ಗಣೇಶ್ ಮತ್ತು ರಾಜೀವ ಎಂಬವರು ಅಪಹರಿಸಿದ್ದಾರೆ ಎಂದು ಆನಂದರ ಪತ್ನಿ ಕಿಶೋರಿಆ.31ರಂದು ಜಿಲ್ಲಾ ಎಸ್ಪಿಗೆ ದೂರು ನೀಡಿದ್ದರು. ಎಸ್ಪಿ ಮಾರ್ಗದರ್ಶನದಲ್ಲಿ ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕ ಅಮಾನುಲ್ಲಾ, ಸಿಬ್ಬಂದಿಗಳಾದ ಎಎಸ್‌ಐ ಸಂಜೀವ ಪುರುಷ, ತಾರಾನಾಥ್, ಇಕ್ಬಾಲ್, ಉದಯ ರೈ, ಪಳನಿವೇಲು, ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಎಎಸ್‌ಐ ಆನಂದ ಪೂಜಾರಿ, ಎಎಸ್‌ಐ ರುಕ್ಮಯ ಮೂಲ್ಯ, ಪ್ರವೀಣ್ ರೈ, ರಕ್ಷಿತ್ ರೈ ಚಾಲಕರಾದ ವಿಜಯ ಗೌಡ ಮತ್ತು ವಾಸು ನಾಯ್ಕಿ ಅವರು ಕಾರ್ಯಚರಣೆಯಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
Next Story





