ಆರೆಸ್ಸೆಸ್ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ಬದ್ಧ: ಹರಿಪ್ರಸಾದ್

ಕಾಪು, ಸೆ.3: ಮಹತ್ಮಾಗಾಂಧಿಯವರನ್ನು ಕೊಂದ ನಾತೂರಾಮ್ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ. ನಾತೂರಾಮ್ ಗೋಡ್ಸೆಗೂ ಆರೆಸ್ಸೆಸ್‌ಗೂ ನಿಕಟ ಸಂಪರ್ಕ ಇದ್ದುದರಿಂದ ರಾಹುಲ್ ಗಾಂಧಿ ಹೇಳಿಕೆ ಸತ್ಯವಾದುದು. ಅದಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಶನಿವಾರ ಭೇಟಿ ದೇವರ ದರ್ಶನ ಪಡೆದು ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಘನತೆ ವಿಶ್ವಮಟ್ಟದಲ್ಲಿ ಹೆಚ್ಚಿದೆ ಎಂಬ ಮಾತು ಸುಳ್ಳು. ಮೋದಿಯವರ ಪ್ರತಿಯೊಂದು ವಿದೇಶ ಪ್ರವಾಸದ ಹಿಂದೆ ಅದಾನಿ ಕಂಪೆನಿ ವ್ಯವಹಾರ ಬೆಳೆಸೋ ಕಾರ್ಯತಂತ್ರ ಇದೆಯೇ ಹೊರತು ದೇಶದ ಪ್ರಗತಿಯ ಚಿಂತನೆ ಇಲ್ಲ ಎಂದು ಅವರು ಟೀಕಿಸಿದರು.
ಇದೀಗ ಪ್ರಧಾನಿ ರಿಲಯನ್ಸ್ ಕಂಪೆನಿಯ ಜಾಹೀರಾತಿನಲ್ಲಿ ರಾರಾಜಿಸು ತ್ತಿದ್ದು, ಬಿಜೆಪಿಗೆ ಚುನಾವಣಾ ವೆಚ್ಚಕ್ಕೆ ಆದಾಯ ಮೂಲವೂ ಅವರೇ ಆಗಿ ದ್ದಾರೆ. ಅವರ ಋಣ ತೀರಿಸೋ ಕೆಲಸ ಇದೀಗ ಮಾಡುತ್ತಿದ್ದಾರೆ. ಇವರ ಆಡಳಿತದಲ್ಲಿ ಅಂಬಾನಿ, ಅದಾನಿಗೆ ಮಾತ್ರ ಒಳ್ಳೆ ದಿನಗಳು ಬಂದಿವೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಯಡಿ ಯೂರಪ್ಪಹಾಗೂ ಅವರ ನಾಯಕರು ಕಳೆದುಕೊಂಡಿದ್ದಾರೆ. ಬಿಜೆಪಿ ಅಡಳಿತಾವಧಿಯಲ್ಲಿ ಆಗಿರುವ ಹಗರಣಗಳು ಮತ್ತು ಅಸಹ್ಯ ವಿದ್ಯಮಾನ ಗಳನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಯಡ್ಡಿಯೂರಪ್ಪ ಮೊದಲು ಈಶ್ವರಪ್ಪನಿಗೆ ಉತ್ತರ ಕೊಡಲಿ. ನಂತರ ಅಧಿಕಾರದ ಕನಸು ಕಾಣಲಿ ಎಂದು ಅವರು ಟೀಕಿಸಿದರು.
ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಲ್ಲವರಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ ಎಂಬ ಮಾತು ಕೇಳಿಬರುತ್ತಿರುವುದು ನಿಜ. ಕಾಂಗ್ರೆಸ್ ಸಾಮಾ ಜಿಕ ನ್ಯಾಯಕ್ಕೆ ಬೆಲೆಕೊಡುವ ಪಕ್ಷವಾಗಿದ್ದು ಎಲ್ಲ ಹಿಂದುಳಿದ ವರ್ಗಗಳಿಗೆ ನಮ್ಮ ಸರಕಾರ ಪ್ರಾತಿನಿಧ್ಯ ನೀಡಿದೆ. ಬಿಲ್ಲವ ಶಾಸಕ, ಮುಖಂಡರಿಗೆ ಶೀಘ್ರವೇ ಪ್ರಾತಿನಿಧ್ಯ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಸದಸ್ಯ ಪಿ.ವಿ.ಮೋಹನ್, ರಾಜಶೇಖರ್ ಕೋಟ್ಯಾನ್, ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಅಶೋಕ್ ಸುವರ್ಣ, ಕಾರ್ಯ ದರ್ಶಿ ಹರೀಶ್ಚಂದ್ರ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.







