ಬೆಳ್ಳಾರೆ ಸರಕಾರಿ ಪದವಿ ಕಾಲೇಜಿನ ಸ್ಕಾರ್ಫ್ ವಿವಾದ: ಶೌವಾದ್ ಗೂನಡ್ಕರವರಿಂದ ಬೆಳ್ಳಾರೆ ಪೋಲಿಸ್ ಉಪನಿರೀಕ್ಷಕರಿಗೆ ಮನವಿ

ಸುಳ್ಯ,ಸೆ.3 ತಾಲೂಕಿನ ಬೆಳ್ಳಾರೆಯ ಸರಕಾರಿ ಪದವಿ ಕಾಲೇಜಿನಲ್ಲಿ ಉಂಟಾಗಿರುವ ಸ್ಕಾರ್ಫ್ ವಿವಾದದ ಕುರಿತಾಗಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೋಮುಭಾವನೆಗಳನ್ನು ಕೆರಳಿಸುವಂತೆ ಮಾಡುತ್ತಿರುವ ಕೆಲವು ಮತೀಯ ಶಕ್ತಿಗಳ ವಿರುದ್ದ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬೆಳ್ಳಾರೆ ಠಾಣೆಯ ಪೋಲಿಸ್ ಉಪ ನಿರೀಕ್ಷಕರಾದ ಚೆಲುವಯ್ಯ ಅವರಿಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಸಮಿತಿಯ ಸಂಘಟನಾ ಕಾರ್ಯದರ್ಶಿ ಶೌವಾದ್ ಗೂನಡ್ಕರವರ ನೇತೃತ್ವದ ನಿಯೋಗ ಇಂದು ಮನವಿಯನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಶೌವಾದ್ ಗೂನಡ್ಕರವರು "ವಿದ್ಯಾಲಯಗಳಿಗೆ ಭಾರತೀಯ ಸಂಸ್ಕ್ರತಿಯಲ್ಲಿ ವಿಶೇಷವಾದ ಸ್ಥಾನಮಾನವಿದೆ.ಅಂತಹ ವಿದ್ಯಾಲಯಗಳಲ್ಲಿ ಇವತ್ತು ವಿದ್ಯಾರ್ಥಿಗಳು ಧರ್ಮದ ಹೆಸರಿನಲ್ಲಿ ಸಂಘರ್ಷಕ್ಕಿಳಿದಿರುವುದು ಖೇದಕರವಾದಂತಹ ವಿಚಾರವಾಗಿದೆ" ಎಂದು ಅವರು ಹೇಳಿದರು.
ನಿಯೋಗದಲ್ಲಿ ಸ್ಥಳಿಯ ಗ್ರಾಮ ಪಂಚಾಯತ್ ಸದಸ್ಯ ಮುಸ್ತಫ ಬೆಳ್ಳಾರೆ,ಬಶೀರ್,ಅಯ್ಯೂಬ್, ಝಕರಿಯಾ,ಸಿರಾಜುದ್ದೀನ್,ಉನೈಸ್ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.





