ಲಂಡನ್, ಸೆ.3: ‘‘ಆಯ್ಕೆಯಾದರೆ ನಾನು ಖಂಡಿತವಾಗಿಯೂ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳುವೆನು. ನಾನು ಬಾಂಗ್ಲಾ ಪ್ರವಾಸವನ್ನು ಎದುರು ನೋಡುತ್ತಿರುವೆನು’’ ಎಂದು ಇಂಗ್ಲೆಂಡ್‌ನ ಆಲ್‌ರೌಂಡರ್ ಮೋಯಿನ್ ಅಲಿ ತಿಳಿಸಿದ್ದಾರೆ.
29ರ ಹರೆಯದಆಲ್‌ರೌಂಡರ್ ಮೋಯಿನ್ ಅಲಿ ಅವರು ಇದು ತನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಅಭಿಪ್ರಾಯವನ್ನು ವ್ಯಕ್ತಪಡಿಸಲು ಯಾರಿಗೂ ಒತ್ತಡವಿಲ್ಲ’’ ಎಂದು ಅವರು ಹೇಳಿದರು. ‘‘ನನ್ನ ನಿಲುವು ಪ್ರಕಾರ ಇತ್ತೀಚಿನ ದಿನಗಳಲ್ಲಿ ನೀವು ಎಲ್ಲಿಯೂ ಸುರಕ್ಷಿತರಲ್ಲ ಎಂದು ಹೇಳಿದ ಅವರು ಬಾಂಗ್ಲಾಕ್ಕೆ ತೆರಳುವುದಾಗಿ ನಿರ್ಧಾರ ಪ್ರಕಟಿಸಿದ ಮೊದಲ ಇಂಗ್ಲೆಂಡ್ ಕ್ರಿಕೆಟಿಗ ಮೋಯಿನ್ ಅಲಿ ಆಗಿದ್ದಾರೆ.
 ಜಾನಿ ಬೈರ್‌ಸ್ಟೋವ್ ಶುಕ್ರವಾರ ಬಾಂಗ್ಲಾ ಪ್ರವಾಸಕ್ಕೆ ತಂಡದ ಆಯ್ಕೆಗೆ ಲಭ್ಯ ರಿರುವುದಾಗಿ ಸುಳಿವು ನೀಡಿದ್ದರು.
ಕಳೆದ ಜುಲೈನಲ್ಲಿ ಢಾಕಾದಲ್ಲಿ ಉಗ್ರರ ದಾಳಿಯ ಬಳಿಕ ಇಂಗ್ಲೆಂಡ್‌ಗೆ ಬಾಂಗ್ಲಾಕ್ಕೆ ಪ್ರವಾಸ ಹೋಗುವುದು ಸವಾಲಾಗಿ ಪರಿಣಮಿಸಿದೆ. ಕಳೆದ ತಿಂಗಳು ಇಸಿಬಿ ನಿಯೋಗ ಬಾಂಗ್ಲಾಕ್ಕೆ ತೆರಳಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿತ್ತು. ಆ ಬಳಿಕ ಕ್ರಿಕೆಟ್ ಮಂಡಳಿಯು ಪ್ರವಾಸಕ್ಕೆ ಆಸಕ್ತಿ ಇರುವ ಅಥವಾ ಇಲ್ಲದ ಬಗ್ಗೆ ಆಟಗಾರರು ತಮ್ಮ ನಿಲುವನ್ನು ತಿಳಿಸುವಂತೆ ಕೇಳಿಕೊಂಡಿತ್ತು. ಇದೇ ವೇಳೆ ಅಲೆಸ್ಟೈರ್ ಕುಕ್ ಅವರು ಬಾಂಗ್ಲಾಕ್ಕೆ ತೆರಳಲು ಆಸಕ್ತಿ ವಹಿಸಿದ್ದಾರೆಂದು ತಿಳಿದು ಬಂದಿದೆ. ಸೀಮಿತ ಓವರ್‌ಗಳ ತಂಡದ ನಾಯಕ ಇಯಾನ್ ಮೊರ್ಗನ್ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ. ಬಾಂಗ್ಲಾ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಆಟಗಾರರ ಆಯ್ಕೆ ಸೆಪ್ಟಂಬರ್ 9ರಂದು ನಡೆಯಲಿದೆ. ,