ಹಲ್ಲೆ ಆರೋಪಿಗಳಿಗೆ ಜಾಮೀನು
ಪುತ್ತೂರು, ಸೆ.3: ತಾಲೂಕಿನ ಮುಂಡೂರು ಗ್ರಾಮದ ಪಟ್ಟೆ ಎಂಬಲ್ಲಿನ ದಫನ ಭೂಮಿಯ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದ ತಕರಾರಿನ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಅಬ್ದುಲ್ ಕುಂಞಿಯ ಮೇಲೆ ಹಲ್ಲೆ ನಡೆಸಿದ ಇಬ್ರಾಹಿಂ, ಉಮ್ಮರ್ ಹಾಗೂ ಇಸುಬು ಎಂಬವರಿಗೆ ಪುತ್ತೂರು ನ್ಯಾಯಾಲಯ ಜಾಮೀನು ನೀಡಿದೆ. ಮುಂಡೂರು ಗ್ರಾಮದ ಪಟ್ಟೆ ಎಂಬಲ್ಲಿರುವ ಸರ್ವೆ ನಂ.115ರಲ್ಲಿ ಎರಡು ಎಕರೆ ಜಾಗವನ್ನು 1996ರಲ್ಲಿ ದಫನ ಭೂಮಿಗೆ ಕಾದಿರಿಸಲಾಗಿತ್ತು. ಇದರ ಗಡಿಗುರುತಿಗೆ ಕಂದಾಯ ನಿರೀಕ್ಷಕ ಮತ್ತು ಗ್ರಾಮಕರಣಿಕ ಹಾಗೂ ಸರ್ವೇಯರ್ ಸ್ಥಳಕ್ಕೆ ಆಗಮಿಸಿದ್ದ ವೇಳೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವುದಾಗಿ ಅಬ್ದುಲ್ ಕುಂಞಿ ಸಂಪ್ಯ ಪೊಲೀಸರಿಗೆ ಮೂವರ ವಿರುದ್ಧ ದೂರು ನೀಡಿದ್ದರು.
Next Story





