ಬಸ್‌ಗೆ ಕಲ್ಲು: ಪ್ರಕರಣ ದಾಖಲು
ಕುಂದಾಪುರ, ಸೆ.3: ತಲ್ಲೂರು ಸೇತುವೆ ಬಳಿ ಸೆ.2ರ ಬಂದ್ ವೇಳೆ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲು ಎಸೆದು ಹಾನಿಗೈದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಿಂದ ಬಾಗಲಕೋಟೆ ಕಡೆಗೆ ಚಲಿಸುತ್ತಿದ್ದ ಬಸ್ಸಿನ ಗಾಜಿಗೆ ಬೆಳಗ್ಗೆ 8ಗಂಟೆಗೆ ಹೆಮ್ಮಾಡಿ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಲ್ಲು ಎಸೆದು ಹಾನಿಗೈದಿದ್ದಾರೆ. ಇದರಿಂದ 12 ಸಾವಿರ ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





