ಪೊಲೀಸ್ ಸಿಬ್ಬಂದಿಗೆ ಕಚ್ಚಿ ಗಾಯ
ಮಂಗಳೂರು, ಸೆ.3: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಖಾಲಿ ಜಾಗವೊಂದರಲ್ಲಿ ಮಣ್ಣು ಹಾಕುವ ವಿಚಾರಕ್ಕೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ, ಹೊಯ್‌ಕೈ ನಡೆದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಗ್ರ ಕೂಳೂರಿನ ಖಾಲಿ ಜಾಗ ವೊಂದರಲ್ಲಿ ಪಾಲಿಕೆ ವತಿಯಿಂದ ಮಣ್ಣು ಹಾಕುತ್ತಿದ್ದಾಗ ವಿರೋಧಿಸಿದ ಸ್ಥಳೀಯರು ಇಲ್ಲಿ ಮಣ್ಣು ಹಾಕಬೇಡಿ, ಹಾದಿಗೆ ಸಮಸ್ಯೆಯಾಗುತ್ತದೆ ಎಂದುಅಡ್ಡಿಪಡಿಸಿದ್ದರು. ಈ ವೇಳೆ ಜನಪ್ರತಿನಿಧಿ ಯೊಬ್ಬರು ಉರ್ವ ಠಾಣೆಗೆ ದೂರು ನೀಡಿದ್ದರು. ಅದರಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಕಾವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬಂಗ್ರ ಕೂಳೂರಿಗೆ ಉರ್ವ ಪೊಲೀಸರು ಯಾಕೆ ಬರಬೇಕೆಂದು ಸ್ಥಳೀಯ ಅರುಣ್, ಕಿರಣ್ ಮೊಬೈಲ್ ಫೋನ್‌ನಲ್ಲಿ ವೀಡಿಯೊ ಮಾಡಲು ಪ್ರಾರಂಭಿಸಿದ್ದರು. ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಲೋಕೇಶ್ ಮೊಬೈಲ್ ಕಸಿದು ಕೊಳ್ಳಲು ಮುಂದಾದಾಗ ಅವರಿಬ್ಬರು ಸಿಬ್ಬಂದಿಯ ಕೈಗೆ ಕಚ್ಚಿ ಮೊಬೈಲ್ ವಾಪಸ್‌ಪಡೆದುಕೊಂಡಿದ್ದಾರೆ. ಇದರಿಂದ ಸಿಬ್ಬಂದಿ ಗೆ ಗಾಯವಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





