ಆರೋಗ್ಯ ಕ್ಷೇತ್ರ ಹಣ ಎಲ್ಲಿಂದ ಬರುತ್ತದೆ, ಎಲ್ಲಿ ಹೋಗುತ್ತದೆ?

ಜನರು ತಮ್ಮ ಜೇಬಿನಿಂದಲೇ ಅಕ ಖರ್ಚು ಮಾಡಲು ಮುಖ್ಯ ಕಾರಣವೆಂದರೆ ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ತೀರಾ ಕಡಿಮೆ ಹಣವನ್ನು ವೆಚ್ಚ ಮಾಡುತ್ತಿರುವುದು. ಸರಕಾರ ದೇಶದ ಜಿಡಿಪಿಯ ಶೇ.1.15ರಷ್ಟು ಹಣವನ್ನು ಅಂದರೆ ಚಾಲ್ತಿ ಆರೋಗ್ಯ ವೆಚ್ಚದ ಶೇ.30ರಷ್ಟನ್ನು ಮಾತ್ರ ವೆಚ್ಚ ಮಾಡುತ್ತದೆ. ಇದು ಬ್ರಿಕ್ಸ್ ಸದಸ್ಯ ದೇಶಗಳ ಪೈಕಿ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.
ಹಣ ಯಾರ ಕೈಸೇರುತ್ತದೆ?
ಆರೋಗ್ಯ ಕ್ಷೇತ್ರದ ಮೇಲೆ ಆಗುವ ಒಟ್ಟು ವೆಚ್ಚದ ಪೈಕಿ ಸುಮಾರು 1.5 ಲಕ್ಷ ಕೋಟಿ ರೂ. (ಶೇ.37.5)ಗಳನ್ನು ಔಷಧಗಳ ಮೇಲೆ ಅಂದರೆ ಫಾರ್ಮಸಿಗಳ ಮೇಲೆ ವೆಚ್ಚ ಮಾಡಲಾಗುತ್ತದೆ. 88.5 ಸಾವಿರ ಕೋಟಿ ರೂ.(ಶೇ.21)ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ವೆಚ್ಚ ಮಾಡಲಾಗುತ್ತದೆ. ಇದು ಸರಕಾರಿ ಆಸ್ಪತ್ರೆಗಳಲ್ಲಿ ಮಾಡುವ ವೆಚ್ಚದ ದುಪ್ಪಟ್ಟು. ಅಂದರೆ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 41.7 ಸಾವಿರ ಕೋಟಿ ರೂ. (ಶೇ.9.9) ವೆಚ್ಚವಾಗುತ್ತಿದೆ. ಸುಮಾರು 28 ಸಾವಿರ ಕೋಟಿ ರೂ.ಗಳು (ಶೇ.6.7) ಪ್ರಯೋಗಾಲಯ ಹಾಗೂ ಡಯಾಗ್ನೋಸ್ಟಿಕ್ಸ್ ಗಳಲ್ಲಿ ವೆಚ್ಚವಾಗುತ್ತವೆ.
ಯಾವುದರ ಬಳಕೆ?
ಮುಖ್ಯವಾಗಿ ಹೊರರೋಗಿಗಳ ವಿಭಾಗ ಹಾಗೂ ಒಳರೋಗಿಗಳ ವಿಭಾಗದಲ್ಲಿ ಆಸ್ಪತ್ರೆಗಳಲ್ಲಿ ವೆಚ್ಚವಾಗುತ್ತದೆ. ಆಸ್ಪತ್ರೆಯಲ್ಲಿ ಒಂದು ದಿನವಿಡೀ ಕಳೆಯದೇ ಬಾಹ್ಯವಾಗಿ ಚಿಕಿತ್ಸೆ ಪಡೆಯುವುದನ್ನು ಹೊರರೋಗಿ ವಿಭಾಗ ಎಂದೂ, 24 ಗಂಟೆಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವುದನ್ನು ಒಳರೋಗಿ ವಿಭಾಗ ಎಂದೂ ಪರಿಗಣಿಸಲಾಗುತ್ತದೆ.
ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ದೇಶದ ಜಿಡಿಪಿಯ ಶೇ.2.5ರಷ್ಟು ಮೊತ್ತವನ್ನು ವಿನಿಯೋಗಿಸುತ್ತಿದೆ ಎಂಬ ವಾದ ದೀರ್ಘಕಾಲದಿಂದಲೇ ಇದೆ. ರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರ (ಎನ್‌ಎಚ್‌ಎ) ದೇಶದ ಆರೋಗ್ಯ ವ್ಯವಸ್ಥೆಗೆ ಹರಿಯುವ ಸಂಪನ್ಮೂಲದ ಮೇಲ್ವಿಚಾರಣೆ ನಡೆಸುತ್ತದೆ ಮತ್ತು ಆರೋಗ್ಯ ಹಣಕಾಸು ಸ್ಥಿತಿಗತಿಯ ವಿಸ್ತೃತ ವಿವರಗಳನ್ನು ನೀಡುತ್ತದೆ. ಒಂದು ದಶಕದ ಸುದೀರ್ಘ ಕಾಯುವಿಕೆ ಬಳಿಕ 2013-14ನೆ ವರ್ಷದ ಎನ್‌ಎಚ್‌ಎ ಅಂದಾಜನ್ನು ಈ ವಾರ ಬಿಡುಗಡೆ ಮಾಡಲಾಗಿದೆ. ಈ ಹಿಂದೆ 2004-05ರ ಸಾಲಿಗೆ ಅಂದಾಜು ಮಾಡಲಾಗಿತ್ತು.
ದೇಶದಲ್ಲಿ 2013-14ನೆ ಸಾಲಿನಲ್ಲಿ ಆರೋಗ್ಯ ಕ್ಷೇತ್ರದ ಒಟ್ಟು ವೆಚ್ಚ 4.5 ಲಕ್ಷ ಕೋಟಿ ರೂ. ಇದು ದೇಶದ ಜಿಡಿಪಿಯ ಶೇ.4ರಷ್ಟು. 2015ರ ಕರಡು ಆರೋಗ್ಯ ನೀತಿ ಇದನ್ನು ಸಮಸ್ಯೆ ಎಂದು ಗುರುತಿಸಿದೆ. ‘‘ಆರೋಗ್ಯ ಕ್ಷೇತ್ರದ ಮೇಲೆ ದೇಶದ ಜಿಡಿಪಿಯ ಶೇ.5ರಿಂದ 6ರಷ್ಟು ಮೊತ್ತವನ್ನು ಖರ್ಚು ಮಾಡದಿದ್ದರೆ ಹಾಗೂ ಇದರ ಬಹುಪಾಲು ವೆಚ್ಚವನ್ನು ಸರಕಾರ ನಿರ್ವಹಿಸದಿದ್ದರೆ, ದೇಶದ ಮೂಲಭೂತ ಆರೋಗ್ಯ ಅಗತ್ಯಗಳನ್ನು ಪೂರೈಸುವುದು ಕಷ್ಟ ಎನ್ನುವುದು ಜಾಗತಿಕವಾಗಿ ನಿರೂಪಿತವಾಗಿದೆ’’ ಎಂದು ಈ ಕರಡು ನೀತಿ ವಿವರಿಸಿದೆ.
ವೆಚ್ಚವಾದ 4.5 ಲಕ್ಷ ಕೋಟಿ ರೂ.ಗಳ ಪೈಕಿ, ಚಾಲ್ತಿ ಆರೋಗ್ಯ ವೆಚ್ಚ 4.2 ಲಕ್ಷ ಕೋಟಿ ರೂ. ಅಂದರೆ ಒಟ್ಟು ವೆಚ್ಚದ ಶೇ.93ರಷ್ಟು. 31.9 ಸಾವಿರ ಕೋಟಿ ರೂ.(ಶೇ.7) ಹೂಡಿಕೆ ವೆಚ್ಚವಾಗಿರುತ್ತದೆ. ಈ ಅಂದಾಜು ಪ್ರಮಾಣ ಆರೋಗ್ಯ ಕ್ಷೇತ್ರಕ್ಕೆ ಸಂಬಂಸಿದ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯಕವಾಗಲಿದೆ. ರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರದ ಪ್ರಮುಖ ಅಂಶಗಳು ಇವು:
ಹಣಕಾಸು ಸಂಪನ್ಮೂಲ ಎಲ್ಲಿಂದ ಬರುತ್ತದೆ?
ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚದಲ್ಲಿ ದೇಶದ ಕುಟುಂಬಗಳು ಮಾಡುವ ವೆಚ್ಚದ್ದೇ ಸಿಂಹಪಾಲು. ಒಟ್ಟು ಚಾಲ್ತಿ ಆರೋಗ್ಯ ವೆಚ್ಚದ ಶೇ.73 ಪಾಲನ್ನು ಕುಟುಂಬಗಳು ವೆಚ್ಚ ಮಾಡುತ್ತವೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ಚಲಾವಣೆಯಾಗುವ ಬಹುತೇಕ ಹಣ ಅಂದರೆ ಶೇ.69ರಷ್ಟು, ವ್ಯಕ್ತಿಗಳು ಸ್ವತಃ ತಮ್ಮ ಜೇಬಿನಿಂದಲೇ ಖರ್ಚು ಮಾಡುವ ಹಣ.
‘‘ಮ್ಯಾನ್ಮಾರ್ ದೇಶವನ್ನು ಹೊರತುಪಡಿಸಿದರೆ ವಿಶ್ವದ ಯಾವುದೇ ಇತರ ರಾಷ್ಟ್ರಗಳಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಜನರೇ ಸ್ವಂತವಾಗಿ ಖರ್ಚು ಮಾಡುವ ನಿದರ್ಶನ ಬೇರೆಲ್ಲೂ ಸಿಗುವುದಿಲ್ಲ. ಇದು ಕಳಕಳಿಯ ವಿಚಾರ’’ ಎಂದು ಆರೋಗ್ಯ ಅರ್ಥಶಾಸ ತಜ್ಞೆ ಮತ್ತು ಎನ್‌ಎಚ್‌ಎ ಅಂದಾಜನ್ನು ಕ್ರೋಡೀಕರಿಸಿರುವ ತಜ್ಞರ ತಂಡದಲ್ಲಿದ್ದ ಸಾಕ್ಷಿ ಸೆಲ್ವರಾಜ್ ಹೇಳುತ್ತಾರೆ. ಜನರು ತಮ್ಮ ಜೇಬಿನಿಂದಲೇ ಅಕ ಖರ್ಚು ಮಾಡಲು ಮುಖ್ಯ ಕಾರಣವೆಂದರೆ ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ತೀರಾ ಕಡಿಮೆ ಹಣವನ್ನು ವೆಚ್ಚ ಮಾಡುತ್ತಿರುವುದು. ಸರಕಾರ ದೇಶದ ಜಿಡಿಪಿಯ ಶೇ.1.15ರಷ್ಟು ಹಣವನ್ನು ಅಂದರೆ ಚಾಲ್ತಿ ಆರೋಗ್ಯ ವೆಚ್ಚದ ಶೇ.30ರಷ್ಟನ್ನು ಮಾತ್ರ ವೆಚ್ಚ ಮಾಡುತ್ತದೆ. ಇದು ಬ್ರಿಕ್ಸ್ ಸದಸ್ಯ ದೇಶಗಳ ಪೈಕಿ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.
ಬಹಳ ಹಿಂದಿನಿಂದಲೂ ದೇಶದ ಜಿಡಿಪಿಯ ಶೇ.2.5ರಷ್ಟನ್ನು ಆರೋಗ್ಯ ಕ್ಷೇತ್ರದ ಮೇಲೆ ವೆಚ್ಚ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸುತ್ತಾ ಬರಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ನೀತಿ-2015ರ ಕರಡು, ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ದೇಶದ ಜಿಡಿಪಿಯ ಶೇ.2.5ರಷ್ಟನ್ನು ವೆಚ್ಚ ಮಾಡುತ್ತಿದೆ ಎಂದು ಅಂದಾಜು ಮಾಡಿತ್ತು.
ಆದರೆ 2016ರ ಜುಲೈ ತಿಂಗಳಲ್ಲಿ ಅಬ್ಸರ್ವರ್ ರಿಸರ್ಚ್ ೌಂಡೇಷನ್ ಆಯೋಜಿಸಿದ್ದ ಆರೋಗ್ಯ ಮಾಹಿತಿ ಸಮಾವೇಶವೊಂದರಲ್ಲಿ ಈ ಅಂಕಿ ಅಂಶಗಳು ತಪ್ಪು ಎಂದು ಸವಾಲು ಹಾಕಲಾಯಿತು. ನೀತಿ ಆಯೋಗದ ಸದಸ್ಯ ವಿವೇಕ್ ದೇವರಾಯ್ ಅವರು, ಈ ಹೆಚ್ಚುವರಿ ಸಂಪನ್ಮೂಲ ಎಲ್ಲಿಂದ ಬರುತ್ತದೆ ಎನ್ನುವುದನ್ನೂ ಹೇಳದಿದ್ದರೆ, ಭಾರತ ಸರಕಾರ ದೇಶದ ಜಿಡಿಪಿಯ ಶೇ.2.5ರಷ್ಟು ಹಣವನ್ನು ಆರೋಗ್ಯ ಕ್ಷೇತ್ರದ ಮೇಲೆ ವೆಚ್ಚ ಮಾಡಬೇಕು ಎಂಬ ವಾದದಲ್ಲಿ ಅರ್ಥವೇ ಇಲ್ಲ ಎಂದು ವಾದಿಸಿದ್ದರು.
‘‘ಆರೋಗ್ಯ ಕ್ಷೇತ್ರದ ಮೇಲೆ ಅಕ ವೆಚ್ಚ ಮಾಡಲು ಹೆಚ್ಚುವರಿ ಸಂಪನ್ಮೂಲವು ತೆರಿಗೆ ವಿನಾಯ್ತಿ ಯನ್ನು ಕಿತ್ತು ಹಾಕುವುದರಿಂದ ಬರಬೇಕೇ ಅಥವಾ, ತೆರಿಗೆ ಮೂಲವನ್ನು ವಿಸ್ತತಗೊಳಿಸುವುದರಿಂದ ಅಥವಾ ಇತರ ಅಭಿವೃದ್ಧಿ ಶೀರ್ಷಿಕೆಗಳಿಂದ ಹಣವನ್ನು ಆರೋಗ್ಯ ಕ್ಷೇತ್ರದತ್ತ ತಿರುಗಿಸಬೇಕೇ?’’ ಎಂದು ಅವರು ಪ್ರಶ್ನಿಸಿದ್ದರು.
‘‘ಸಂಪನ್ಮೂಲದ ಕೊರತೆ ಇರುವ ದೇಶದಲ್ಲಿ, ನಮ್ಮ ಆದ್ಯತೆಗಳ ಬಗ್ಗೆ ಒಮ್ಮತಾಭಿಪ್ರಾಯ ಇಲ್ಲದಿದ್ದರೆ, ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಜಿಡಿಪಿಯ ಶೇ.2.5ಕ್ಕೆ ಹೆಚ್ಚಿಸಬೇಕು ಎಂಬಂಥ ಹೇಳಿಕೆಗಳು ಅರ್ಥಪೂರ್ಣ ಎಂದು ಎನಿಸುವುದಿಲ್ಲ’’ ಎಂದು ವಾದ ಮಂಡಿಸಿದ್ದರು.







