ಅಪಘಾತಕ್ಕೀಡಾದ ವ್ಯಕ್ತಿಯ ಮೃತದೇಹದ ಮೇಲೆಯೇ ಅರ್ಧಗಂಟೆ ಓಡಾಡಿದ ಇತರ ವಾಹನಗಳು !
ಅಮಾನವೀಯ!

ಜೈಪುರ,ಸೆಪ್ಟಂಬರ್ 4: ರಸ್ತೆಅಪಘಾತದ ಅತ್ಯಂತ ದಾರುಣ ಸ್ಥಿತಿ ಇದೆಂದು ಹೇಳಬಹುದು. ಜೈಪುರ ನಗರದಲ್ಲಿ ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮೂವತ್ತು ವರ್ಷವಯಸ್ಸಿನ ವ್ಯಕ್ತಿಯೊಬ್ಬನಿಗೆ ಢಿಕ್ಕಿಹೊಡೆದ ವಾಹನ ನಿಲ್ಲಿಸದೆ ಹೋಯಿತು. ರಸ್ತೆಯ ಮಧ್ಯೆ ರಕ್ತದ ನಡುವೆ ಬಿದ್ದಿದ್ದ ಈತನ ದೇಹದಲ್ಲಿ ಹಿಂದಿನಿಂದ ಬಂದವಾಹನಗಳು ಹಾದು ಹೋಗತೊಡಗಿವೆ. ಯಾರಿಗೂ ಅನುಕಂಪ ಅಥವಾ ಲಜ್ಜೆಯೋಅನಿಸಲಿಲ್ಲ. ಯಾವ ವಾಹನವೂ ನಿಲ್ಲಿಸದೆ ಮುಂದೆ ಸಾಗಿದೆ ಎಂದು ವರದಿಯೊಂದು ತಿಳಿಸಿದೆ.
ಅರ್ಧಗಂಟೆಯ ಬಳಿಕ ಪೊಲೀಸರು ಬಂದು ನೋಡುವಾಗ ಮೃತದೇಹ ರಸ್ತೆಯ ನಡು ವೆ ಚಿಂದಿಚಿಂದಿಯಾಗಿ ಬಿದ್ದಿತ್ತು. ದೇಹದ ಪ್ರತಿಯೊಂದು ಭಾಗವನ್ನು ಹೆಕ್ಕಲಿಕ್ಕಷ್ಟೆ ಪೊಲೀಸರಿಗೆ ಸಾಧ್ಯವಾಗಿತ್ತು ಎನ್ನಲಾಗಿದೆ. ಜೈಪುರದ ಪೋಲೊ ಥಿಯೇಟರ್‌ನ ಸಮೀಪದಲ್ಲಿ ಈ ಅಪಘಾತ ಸಂಭವಿಸಿತ್ತು.
ಮೃತದೇಹ ಯಾರದೆಂದು ಪತ್ತೆಹಚ್ಚಲು ಕೂಡಾ ಸಾಧ್ಯವಾಗಿಲ್ಲ. ಅಪಘಾತ ನಡೆದ ಸ್ಥಳಕ್ಕೆ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿಯೂ ರಾತ್ರಿವೇಳೆಯಾದ್ದರಿಂದ ಅಪಘಾತದ ದೃಶ್ಯ ದಾಖಲಾಗಿಲ್ಲ. ಅಪಘಾತದಲ್ಲಿ ಸತ್ತ ವ್ಯಕ್ತಿಯಾರೆಂದು ಗುರುತಿಸಲಾಗದ ಸ್ಥಿತಿಯಲ್ಲಿ ಪೊಲೀಸರು ಇದ್ದಾರೆ.
ಈ ಹಿಂದೆ ದಿಲ್ಲಿಯಲ್ಲಿ ನಡೆದಿದ್ದ ವಾಹನಅಪಘಾತದಲ್ಲಿಗಾಯಗೊಂಡು ರಸ್ತೆಬದಿಗೆಸೆಯಲ್ಪಟ್ಟ ವ್ಯಕ್ತಿಯ ಅವಸ್ಥೆಗೆ ಸಮಾನವಾದ ಘಟನೆ ಇದು. ಇಲ್ಲಿ ಈ ವ್ಯಕ್ತಿಯ ಮೊಬೈಲ್‌ಫೋನ್ ಯಾರೋ ಕದ್ದುಕೊಂಡು ಹೋಗಿದ್ದರು ಎಂದು ವರದಿ ತಿಳಿಸಿದೆ.







