ಅತ್ಯಾಚಾರವನ್ನು ವಿರೋಧಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಹತ್ಯೆ!
.jpg)
ಮುಂಬೈ,ಸೆಪ್ಟಂಬರ್ 4: ಅತ್ಯಾಚಾರಕ್ಕೆ ಯತ್ನಿಸಿದಾಗ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್ರತಿರೋಧಿಸಿದ ಪರಿಣಾಮ ಆಕೆಯನ್ನು ಕೊಡಲಿಯಿಂದ ಕೊಚ್ಚಿಕೊಲೆಗೈದ ಘಟನೆ ಮುಂಬೈನ ವಿರಾರ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯ ಪ್ರಿಯತಮನ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.
ವಿವ ಕಾಲೇಜಿನ ಎರಡನೆವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಐಶ್ವರ್ಯ(19)ಹಂತಕನ ಕೊಡಲಿಯೇಟಿಗೆ ದಾರುಣವಾಗಿ ಹತ್ಯೆಯಾದ ನತದೃಷ್ಟ ಯುವತಿಯಾಗಿದ್ದು, ವಿರಾರ್ ವೆಸ್ಟ್ ಓಂಶಿಯ ಎಂಬಲ್ಲಿನ ವಿವಾಸಿಯಾದ ದೀಪಕ್‌ವಾಂಗ್ರಿಯನ್ನು ಕೊಲೆಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ದೀಪಕ್ ವಾಸವಿರುವ ಪ್ಲಾಟ್‌ನಲ್ಲಿ ಐಶ್ವರ್ಯ ಮತ್ತು ಸೊಹೈಲ್ ಆಗಾಗ ಭೇಟಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತರಕಾರಿ ವ್ಯಾಪಾರಿಯಾದ ದೀಪಕ್ ಮತ್ತು ಪತ್ನಿ ಹೊರಗೆ ಹೋಗುತ್ತಿದ್ದ ಸಮಯದಲ್ಲಿ ಇವರಿಬ್ಬರು ಭೇಟಿಯಾಗುತ್ತಿದ್ದರು ಎನ್ನಲಾಗಿದೆ.
ಶುಕ್ರವಾರ ಐಶ್ವರ್ಯ ಬಂದಾಗ ಅಲ್ಲಿಗೆ ಸುಹೈಲ್ ಬಂದಿರಲಿಲ್ಲ. ಪ್ಲಾಟ್‌ನಲ್ಲಿದ್ದ ದೀಪಕ್ ತನ್ನ ಬಯಕೆಯನ್ನು ತೋಡಿಕೊಂಡಾಗ ಐಶ್ವರ್ಯ ವಿರೋಧಿಸಿದ್ದಾಳೆ. ಆತ ನಂತರ ಐಶ್ವರ್ಯಳ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅದನ್ನು ಐಶ್ವರ್ಯ ಪ್ರತಿಭಟಿಸಿದ್ದಾಳೆ. ಇದರಿಂದ ಕೋಪಗೊಂಡ ದೀಪಕ್ ಕೊಡಲಿ ತೆಗೆದುಕೊಂಡು ಬಂದು ಐಶ್ವರ್ಯಳನ್ನು ಕೊಚ್ಚಿಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಐಶ್ವರ್ಯಳ ಶರೀರದಲ್ಲಿ ಕೊಡಲಿಏಟಿನ ಹದಿನೇಳು ಗಾಯದ ಕಲೆಗಳಿವೆ.
ಕೊಲೆಗೈದು ಪರಾರಿಯಾಗಲು ಶ್ರಮಿಸಿದ ದೀಪಕ್‌ನನ್ನು ದಾರಿಯ ಮಧ್ಯೆ ಸುಹೈಲ್ ತಡೆದು ನಿಲ್ಲಿಸಿ, ಸಮೀಪ ನಿವಾಸಿಗಳನ್ನು ಕರೆದು ಆರೋಪಿಯನ್ನು ಸುಹೈಲ್‌ನೇ ಪೊಲೀಸ್‌ಠಾಣೆಗೆ ತಲುಪಿಸಿದ್ದಾನೆ. ಐಶ್ವರ್ಯ ತನ್ನ ಬಾಲ್ಯಗೆಳತಿಯೆಂದು ಸುಹೈಲ್ ಹೇಳಿದ್ದಾನೆ. ಮನೆಯವರ ವಿರೋಧವನ್ನು ಲೆಕ್ಕಿಸದೆ ಅವಳನ್ನು ಮದುವೆಯಾಗಲು ತಾನು ಬಯಸಿದ್ದೆ ಎಂದೂ ಆತ ತಿಳಿಸಿದ್ದಾನೆಂದು ವರದಿ ತಿಳಿಸಿದೆ.







